ಪುತ್ತೂರು; ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕತ್ತಾರ್ ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ನೇಸರ ಕಂಪರವರು ಆಯ್ಕೆಯಾಗಿದ್ದಾರೆ. ಮಾ.8ರಂದು ದೇವಸ್ಥಾನದಲ್ಲಿ ಆಡಳಿತಾಧಿಕಾರಿ ತುಳಸಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಸಮಿತಿಗೆ ಅಧ್ಯಕ್ಷ ಸ್ಥಾನಕ್ಕೆ ರವಿ ಶೆಟ್ಟಿಯವರ ಹೆಸರನ್ನು ಉಮೇಶ್ ನಾಡಾಜೆ ಸೂಚಿಸಿ, ಸದಾಶಿವ ಶೆಟ್ಟಿ ಪಟ್ಟೆ ಅನುಮೋದಿಸಿದರು.
ವ್ಯವಸ್ಥಾಪನಾ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು. ನೂತನಅಧ್ಯಕ್ಷ ರವಿ ಶೆಟ್ಟಿಯವರು ಮಾತನಾಡಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆಶ್ರಮಿಸಲಾಗುವುದು ಎಂದು ಹೇಳಿ, ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಯಾಚಿಸಿದರು.ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ರೂ.5 ಲಕ್ಷ ಅನುದಾನದಲ್ಲಿ ದೇವಾಲಯದಎದುರು ಭಾಗಕ್ಕೆ ಶಾಶ್ವತ ಛಾವಣಿ ನಿರ್ಮಾಣದ ಕೆಲಸವನ್ನು ಶೀಘ್ರದಲ್ಲೇ ಆರಂಭಿಸುವುದಾಗಿತಿಳಿಸಿದರು. ಆಡಳಿತಾಧಿಕಾರಿ ತುಳಸಿ ಸ್ವಾಗತಿಸಿ, ಸದಾಶಿವ ಶೆಟ್ಟಿ ವಂದಿಸಿದರು.