ಮಾರ್ಚ್ 15 ಮತ್ತು 16ರಂದು ನರಿಮೊಗರು ಮೃತ್ಯುಂಜೇಶ್ವರ ದೇಗುಲದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮವು ಮಾ. 9 ರಂದು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ರಮೇಶ್ ಬೈಪಡಿತ್ತಾಯ ವಿಧಿವಿಧಾನಗಳನ್ನು ನೆರವೇರಿಸಿದರು. ಶಿವಪ್ರಸಾದ್ ಶಾಂತಿಗೋಡು, ದೇವಸ್ಥಾನದ ಸಿಬ್ಬಂದಿ ಕೇಶವ ನಾಯ್ಕ, ಮಾಧವ ಸಾಲಿಯಾನ್, ಜನಾರ್ಧನ ಕುರೆಮಜಲು, ದೇವಪ್ಪ ಪುತ್ತಿಲ, ಮಾಧವ ಮಡಿವಾಲ, ಜಗದೀಶ್ ಕಲ್ಲಮ, ಬಾಲಕೃಷ್ಣ ರೈ ಮರ್ತಡ್ಕ, ಆಶೀಕ್ ನಡುಬೈಲು, ಪುರಂದರ ಗೌಡ, ದರ್ಣಪ್ಪ ಗೌಡ, ಹರೀಶ ಗೌಡ ನಡುಬೈಲು, ಬಾಲಚಂದ್ರ ಸೊರಕೆ, ಹಾಗೂ ಜಾತ್ರೋತ್ಸವ ಸಮಿತಿ ಗೌರವ ಸಲಹೆಗಾರರಾದ ಅಶೋಕ ಪುತ್ತಿಲ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹೇಶ್ಚಂದ್ರ ಸಾಲಿಯಾನ್, ಮಾಜಿ ಸದಸ್ಯ ಜಯಾನಂದ ಪಟ್ಟೆ, ಮಾಜಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ, ಜನಾರ್ಧನ ಜೋಯಿಸ ಹಾಗೂ ಭಕ್ತರು ಭಾಗವಹಿಸಿದ್ದರು.