ಪುತ್ತೂರು: ಆಲ್ಟೊ ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ, ಆಟೋ ರಿಕ್ಷಾ ರಸ್ತೆ ಪಕ್ಕದಲ್ಲಿನ ತೋಟಕ್ಕೆ ಪಲ್ಟಿಯಾದ ಘಟನೆ ನೆಕ್ಕಿಲಾಡಿಯಲ್ಲಿ ಜ.28 ರಂದು ನಡೆದಿದೆ.
ಉಪ್ಪಿನಂಗಡಿ ಕಡೆ ಹೋಗುತ್ತಿರುವ ಆಲ್ಟೊ ಕಾರು ಮತ್ತು ಪುತ್ತೂರು ಕಡೆ ಬರುತ್ತಿರುವ ಆಟೋ ರಿಕ್ಷಾ ನಡುವೆ ನೆಕ್ಕಿಲಾಡಿಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಿಂದಾಗಿ ಆಟೋ ರಿಕ್ಷಾ ರಸ್ತೆ ಪಕ್ಕದಲ್ಲಿರುವ ತೋಟಕ್ಕೆ ಪಲ್ಟಿಯಾಗಿದ್ದು, ಆಟೋ ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಆಟೋ ಚಾಲಕನನ್ನು ಉಪ್ಪಿನಂಗಡಿ ನೇತ್ರಾವತಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ಕಲಂದರ್ ಶಾಫಿ ಎನ್ನಲಾಗಿದೆ.
ಅಪಘಾತದಿಂದಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.