ಪುತ್ತೂರು: ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಯಂತ್ರವು ಕೆಟ್ಟು ಹೋಗಿದ್ದು, ಈ ಬಗ್ಗೆ ತಿಳಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿ ಯಂತ್ರವನ್ನು ಶೀಘ್ರ ದುರಸ್ಥಿಗೊಳಿಸುವಂತೆ ಆಗ್ರಹಿಸಿದರು.
ಬೇರೆ ಎಲ್ಲಾ ಚಿಕಿತ್ಸೆಗಳಾದರೇ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸಬಹುದು ಆದರೇ ಡಯಾಲಿಸಿಸ್ ಮೊದಲಿಗೆ ಒಂದು ಕಡೆ ಮಾಡಿಕೊಂಡರೆ ಅಲ್ಲೇ ಮುಂದುವರೆಸಬೇಕು, ಮತ್ತೆ ಇನ್ನೊಂದು ಕಡೆ ಚಿಕಿತ್ಸೆಗೆ ಹೋಗಬೇಕಿದ್ದರೆ ಮತ್ತೆ ಪುನಃ ಪರೀಕ್ಷೆ ಮಾಡಿಸಿ ಅಲ್ಲಿ ಹೊಂದುವ ರೀತಿ ಆಗಬೇಕು. ಹೇಗೇಗೊ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಅಂತಹ ಸಂದರ್ಭದಲ್ಲಿ ಇದು ಕೆಟ್ಟು ಹೋದರೆ ತಕ್ಷಣ ರಿಪೇರಿ ಮಾಡಿಸುವುದು ಇಲಾಖೆಯ ಕರ್ತವ್ಯವಾಗಿದೆ ಎಂದರು.
ಮೆಡಿಕಲ್ ಆಫೀಸರ್ ಹೇಳಿದ ಪ್ರಕಾರ ಆಸ್ಪತ್ರೆಯವರು ಹೇಳಿದ ನಂತರ, ಅವರು ಬಂದು ಅದನ್ನು ಪರಿಶೀಲನೆ ಮಾಡಿ ನಂತರ ಟೆಂಡರ್ ಕೊಟ್ಟು, ಟೆಂಡರ್ ಆಗಿ ಬರುವಾಗ ರೋಗಿಗಳ ಪರಿಸ್ಥಿತಿ ಏನಾಗಬೇಕು..?? ಅವರು ಏನು ಮಾಡಬೇಕು..?? ಸರಕಾರಿ ಆಸ್ಪತ್ರೆಗೆ ಬರುವುದೇ ಬಡವರು, ಬಡವರಿಗೆ ಗತಿ ಇಲ್ಲದಂತಹ ಸ್ಥಿತಿ ಬರಬಾರದು ಅಂತ ಹೇಳಿ ಡಿ.ಎಚ್.ಒ ಹತ್ತಿರ ಮಾತನಾಡಿದ್ದೇನೆ, ತಕ್ಷಣ ಅದನ್ನು ರಿಪೇರಿ ಮಾಡಿಸಿ ನಾಳೆಯಿಂದಲೇ ಡಯಾಲಿಸಿಸ್ ಮಾಡಿಸುವ ರೋಗಿಗಳಿಗೆ ಅವಕಾಶ ಮಾಡಿಕೊಡಬೇಕು ಅವರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಮನವಿ ಮಾಡಿದ್ದೇನೆ. ನಾಳೆಗೆ ದುರಸ್ಥಿ ಮಾಡಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.
































