ಪುತ್ತೂರು: ಶೀಘ್ರ ಫಲಿತಾಂಶ ಮತ್ತು ಗುಣಮಟ್ಟದ ಸೇವೆಯ ಮೂಲಕ ಜನತೆಯ ವಿಶ್ವಾಸಗಳಿಸಿಕೊಂಡಿರುವ ‘ವಿ ಕೇರ್ ಲ್ಯಾಬೊರೇಟರೀಸ್’ನ ಮೂರನೇ ಶಾಖೆಯು ಫೆ.3 ರಂದು ಅಡ್ಯನಡ್ಕದಲ್ಲಿ ಶುಭಾರಂಭಗೊಳ್ಳಲಿದೆ.
‘ವಿ ಕೇರ್’ ಲ್ಯಾಬೊರೇಟರಿಯನ್ನು ಅಹ್ಮದ್ ಕೆ.ಪಿ. ಕುಂಜೂರುಪಂಜ ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಶ್ರೀರಾಮ್ ಬಿಎಎಂಎಸ್, ಡಾ.ಗಗನ್ ಸುಪ್ರಭಾ, ಡಾ ಸುಬ್ರಹ್ಮಣ್ಯ, ಡಾ.ವಿಶ್ವೇಶ್ವರ ಜೆಕೆ, ಕೇಪು ಪಂಚಾಯತ್ ಉಪಾಧ್ಯಕ್ಷ ರಾಘವ, ಅಡ್ಯನಡ್ಕ ಪಂಚಾಯತ್ ಮಾಜಿಸದಸ್ಯ ಹರಿಪ್ರಸಾದ್, ಅಬ್ದುಲ್ ರಹಿಮಾನ್ ಮುದರಿಸ್, ಶರೀಫ್ ಅಧ್ಯಕ್ಷರು ರಾಹ್ಮನಿಯ ಜುಮ್ಮಾ ಮಸ್ಜಿದ್ ಅಡ್ಯನಡ್ಕ, ಕೇಪು ಪಂಚಾಯತ್ ಸದಸ್ಯ ಕರೀಂ, ನಡ್ಕಸ್ ಮಾಲಕ ಹಮೀದ್ ನಡ್ಕಸ್, ಅಬ್ದುಲ್ ಸತ್ತಾರ್, ಹೆಲ್ತ್ ಪ್ಲಸ್ ಮೆಡಿಕಲ್ ಮಾಲಕರಾದ ಆಸೀಫ್, ದಾವೂದ್ ಕೋಡಿಂಬಾಡಿ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.
ಒಳತ್ತಡ್ಕದ ಉದ್ಯಮಿ ಕೆ.ಪಿ. ಅಬ್ದುಲ್ ನವಾಜ್ ಮಾಲಕತ್ವದಲ್ಲಿ ‘ರಿಸಲ್ಟ್ ಯು ಕ್ಯಾನ್ ಬಿಲೀವ್ ಇನ್’ ಎನ್ನುವ ಸ್ಲೋಗನ್‌ನೊಂದಿಗೆ ಕಾರ್ಯಾಚರಿಸುತ್ತಿರುವ ‘ವಿ ಕೇರ್ ಲ್ಯಾಬೊರೇಟರೀಸ್’ನ ಪ್ರಥಮ ಶಾಖೆಯು ಕಳೆದ 2 ವರ್ಷಗಳಿಂದ ವಿಟ್ಲದ ಮೋತಿ ಸಿಟಿ ಕಾಂಪ್ಲೆಕ್ಸ್‌ನಲ್ಲಿ ಮತ್ತು ಕಳೆದ 1 ವರ್ಷದಿಂದ ಪುತ್ತೂರು ಕಲ್ಲಾರೆ ಮುಖ್ಯ ರಸ್ತೆಯ ಶ್ರೀನಿವಾಸ್ ಫ್ಲಾಜಾದಲ್ಲಿ ಕಾರ್ಯಾಚರಿಸುತ್ತಿದೆ.
ರಕ್ತ, ಮೂತ್ರ, ಮಲ, ಕಫದ ಮಾದರಿಗಳ 500ಕ್ಕೂ ಹೆಚ್ಚು
ವಿಧದ ತಪಾಸಣಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಆತ್ಯಾಧುನಿಕ, ಸುಸಜ್ಜಿತ ಯಂತ್ರೋಪಕರಣಗಳನ್ನು ಲ್ಯಾಬ್ ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯಲ್ಲಿ ವಿವಿಧ ರಕ್ತಪರೀಕ್ಷಾ ಪ್ಯಾಕೇಜ್‌ಗಳು ಲಭ್ಯವಿದೆ.
ಬ್ಲಡ್ ಶುಗರ್ ಮತ್ತು ಬಿಪಿ ಪರೀಕ್ಷೆಯನ್ನು ಕೂಡ ಸಂಸ್ಥೆಯು ಉಚಿತವಾಗಿ ಮಾಡಿಕೊಡಲಿದೆ. ಅಪಾಯಿಂಟ್ಮೆಂಟ್ ಮತ್ತು ಮನೆಯಿಂದಲೇ ಸ್ಯಾಂಪಲ್ ಕಲೆಕ್ಷನ್ ಮಾಡಿಕೊಳ್ಳುವ
ವ್ಯವಸ್ಥೆಯೂ ಇಲ್ಲಿದೆ.
ಇದೀಗ ಶುಭಾರಂಭದ ಪ್ರಯುಕ್ತ ಕೊಡುಗೆಯಾಗಿ ಎಲ್ಲಾ ಬಗೆಯ ಟೆಸ್ಟ್‌ಗಳ ಮೇಲೆ 25% ರಿಯಾಯಿತಿ ಲಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 7975339159 ಅನ್ನು
ಸಂಪರ್ಕಿಸಬಹುದಾಗಿದೆ.