ವಿಟ್ಲ: ಉದ್ಯಮ ವ್ಯವಹಾರದಲ್ಲಿ ಮಂಜುನಾಥರವರು ತೊಡಗಿಕೊಂಡಿದ್ದಾರೆ. ಉತ್ತಮ ಉದ್ದೇಶ ಇಟ್ಟುಕೊಂಡು ಮಾಡಿದ ಕೆಲಸದಲ್ಲಿ ಯಶಸ್ಸು ಹೆಚ್ಚು. ಯಾವುದೇ ಸಂಸ್ಥೆಯ ಯಶಸ್ಸಿನ ಗುಟ್ಟು ಪ್ರಾಮಾಣಿಕತೆಯಲ್ಲಿದೆ. ಮಂಜುನಾಥರು ಅದರಲ್ಲಿ ಯಶಸ್ಸಾಗಿದ್ದಾರೆ. ಇಷ್ಟುವರುಷಗಳ ಕಾಲ ಒಂದು ಸಂಸ್ಥೆ ಮುನ್ನಡೆಸಿಕೊಂಡು ಹೋಗುವುದು ಬಲು ಸುಲಭದ ಕೆಲಸವಲ್ಲ. ಗ್ರಾಹಕರ ವಿಶ್ವಾಸವೇ ಸಂಸ್ಥೆಯ ಯಶಸ್ಸಿನ ಗುಟ್ಟು, ಅನುಕೂಲ, ಪ್ರತಿಕೂಲತೆಯನ್ನು ಅರಿತುಕೊಂಡು ನಾವು ಸಾಗಬೇಕಿದೆ. ಉತ್ತಮ ಸೇವೆ ಗ್ರಾಹಕರಿಗೆ ಸಿಕ್ಕಿದಾಗ ಸಂಸ್ಥೆ ಮತ್ತಷ್ಟು ಗಟ್ಟಿಯಾಗಲುಸಾಧ್ಯ. ಮಂಜುನಾಥರು ಸಾಮಾಜಿಕ, ಧಾರ್ಮಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ. ತುಳು ನಾಡ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.
ವಿಟ್ಲದ ಹನುಮಾನ್ ಕಾಂಪ್ಲೆಕ್ಸ್ ನಲ್ಲಿ ಕಳೆದ 31 ವರುಷಗಳಿಂದ ವ್ಯವಹಾರ ನಡೆಸುತ್ತಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟೋನಿಕ್ಸ್ ಮತ್ತು ಫರ್ನಿಚರ್ಸ್ ನ 6ನೇ ಸೀಸನ್ ನ ಉಳಿತಾಯ ಯೋಜನೆಯ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಕಟ್ಟಡದ ಮಾಲಕರಾದ ವೆಂಕಟೇಶ್ ಭಟ್ ವಿಟ್ಲ, ಮಾಜಿ ಸೈನಿಕರಾದ ದಾಸಪ್ಪ ಪೂಜಾರಿ ನೆಕ್ಕಿಲಾರು, ಭಾರತ್ ಶಾಮಿಯಾನದ ಮಾಲಕರಾದ ಸಂಜೀವ ಪೂಜಾರಿ, ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು, ಒಡಿಯೂರು ಘಟಸಮಿತಿ ಸದಸ್ಯರಾದ ಸುನಿಲ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಹೆಚ್. ಸಂಸ್ಥೆಯ ಮಾಲಕರಾದ ಮಂಜುನಾಥ, ಸಂಸ್ಥೆಯ ಮಾಲಕರ ತಾಯಿ ಭವಾನಿ ಮುಳ್ಳೆರಿಯ, ಅಣ್ಣ ರವೀಂದ್ರನಾಥ ಪೆರ್ಲ, ಪತ್ನಿ ರಶ್ಮಿ ಮಂಜುನಾಥ ವೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ವೆಂಕಟೇಶ್ ಭಟ್ ವಿಟ್ಲರವರನ್ನು ಸನ್ಮಾನಿಸಲಾಯಿತು. ವಿಶಾಲಕ್ಷ್ಮಿ, ಜಯಾ ಶ್ರೀ ಪ್ರಾರ್ಥಿಸಿದರು. ಸಂಸ್ಥೆಯ ಮಾಲಕರಾದ ಮಂಜುನಾಥರವರು ಸ್ವಾಗತಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಹೆಚ್. ವಂದಿಸಿದರು. ಸಂಸ್ಥೆಯ ಮಾಲಕರ ಪುತ್ರ ಶ್ರೀಶಾಸ್ತ್ರ, ಪುತ್ರಿ ಶ್ರೀದೇವಿ, ಪ್ರಮುಖರಾದ ಕೇಶವ ದೈಪಿಲ ಬಿ.ಸಿ.ರೋಡ್, ಸದಾಶಿವ ಮೊಟ್ಟೆತ್ತಡ್ಕ, ಮಂಜುನಾಥೇಶ್ವರ ಎಲೆಕ್ಟೋನಿಕ್ಸ್ ಫರ್ನಿಚರ್ಸ್ ಪುತ್ತೂರು ಶಾಖಾ ವ್ಯವಸ್ಥಾಪಕರಾದ ಶಿವಪ್ರಸಾದ್ ಕೆ., ಸಂಸ್ಥೆಯ ಸಿಬ್ಬಂದಿಗಳಾದ ಶರತ್, ವಿಶ್ಲೇಶ್, ದಿವಾಕರ್, ಅಶ್ವಿನಿ ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು.
25 ತಿಂಗಳ ಉಳಿತಾಯ ಯೋಜನೆ: ಈ ಉಳಿತಾಯ ಯೋಜನೆಯಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ರೂ. 500ರಜತೆ50 ಕಂತು ಪಾವತಿಸಬೇಕಾಗಿದ್ದು, ವಿಜೇತಸದಸ್ಯರಿಗೆ ದ್ವಿಚಕ್ರ ವಾಹನ, ಎಲೆಕ್ಟೋನಿಕ್ಸ್ ಐಟಂ, ಫರ್ನಿಚರ್ ಐಟಂಗಳು, ಚಿನ್ನದ ಆಭರಣಗಳು ಇನ್ನೂ ಬಹಳಷ್ಟು ಐಟಂಗಳನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಇಷ್ಟು ಮಾತ್ರವಲ್ಲದೆ ಬಂಪರ್ ಬಹುಮಾನವಾಗಿ ಆಲೋ ಕೆ10 ಕಾರನ್ನು ಗೆಲ್ಲಬಹುದಾಗಿದೆ. ವಿಜೇತರಾಗದೆ ಉಳಿದ ಸದಸ್ಯರಿಗೆ ಅವರ ಪಾವತಿ ಮೊತ್ತದಷ್ಟೇ ಮೌಲ್ಯದ ಎಲೆಕ್ಟ್ರಾನಿಕ್ಸ್ ಫರ್ನೀಚರ್ಸ್ ಐಟಂಗಳನ್ನು ಸಂಸ್ಥೆ ಉತ್ತಮ ವಾರಂಟಿಯೊಂದಿಗೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08255 265122 ಮೊಬೈಲ್ ಸಂಖ್ಯೆ 7892938713ಯನ್ನು ಸಂಪರ್ಕಿಸಬಹುದಾಗಿದೆ.



























