ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 16ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ.ಸುರೇಶ್ ಪುತ್ತೂರಾಯ, ಸಮಿತಿಯ ಸಂಚಾಲಕರಾಗಿ ಕಿರಣ್ ಕುಮಾರ್ ರೈ ಕಬ್ಬಿನಹಿತ್ಲು, ಸಹ ಸಂಚಾಲಕರಾಗಿ ಲಕ್ಷ್ಮಣ್ ಬೈಲಾಡಿ, ಸಮಿತಿಯ ಕಾರ್ಯದರ್ಶಿಯಾಗಿ ಸೇಶಪ್ಪ ಬೆಳ್ಳಿಪ್ಪಾಡಿ,ಕೋಶಾಧಿಕಾರಿಯಾಗಿ ಜಿತೇಶ್ ಬಲ್ನಾಡ್ ಆಯ್ಕೆಯಾಗಿದ್ದಾರೆ.
ಉಪಧ್ಯಾಕ್ಷರುಗಳಾಗಿ ಶ್ರೀಮತಿ ರೂಪಲೇಖಾ ಪರ್ಲಡ್ಕ, ಶ್ರೀ ಮೋಹನ್ ಕೆ ,ಶ್ರೀ ಸುರೇಶ್ ರೈ ,ವಿಜಯ್ ಪಾಲಾರ್, ಸಹ ಕಾರ್ಯದರ್ಶಿಗಳಾಗಿ ಚೇತನ್ ಬೊಳುವಾರು ,ಹರಿಣಿ ಪುತ್ತೂರಾಯ ಮತ್ತು ಸಹ ಕೋಶಾಧಿಕಾರಿಗಳಾಗಿ ಜೀವನ್ ಬಲ್ನಾಡ್,ಪ್ರದೀಪ್ ಆಜಲಡ್ಕ ಇವರು ಅಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ,ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಬಿ.ಎಸ್,ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷರಾದ ದಾಮೋದರ ಪಾಟಾಳಿ ಮತ್ತು ಪುತ್ತೂರು ನಗರ ಹಾಗೂ ಗ್ರಾಮಾಂತರ ಪ್ರಖಂಡದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


























