ಪುತ್ತೂರು: ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟೆಕ್) ಯುವ ಕಾಂಗ್ರೆಸ್ ಪುತ್ತೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಘಟಕದ ಅಧ್ಯಕ್ಷರಾಗಿ ಮಹಮ್ಮದ್ ಅಜೀಮ್ ಬನ್ನೂರು(ಅಡ್ಡಗದ್ದೆ), ಉಪಾಧ್ಯಕ್ಷರಾಗಿ ಸಾದಿಕ್ ಪಂಜಳ, ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಮೊಟ್ಟೆತಡ್ಕ ಹಾಗೂ ಕಾರ್ಯದರ್ಶಿಯಾಗಿ ಇಮ್ರಾನ್ ಪುರುಷರಕಟ್ಟೆ ಅವರನ್ನು ನೇಮಕಗೊಳಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಅನುಮೋದನೆ ಹಾಗೂ ಕರ್ನಾಟಕ ರಾಜ್ಯ ಇಂಟೆಕ್ ಅಧ್ಯಕ್ಷ ಡಿ. ಲಕ್ಷ್ಮಿ ವೆಂಕಟೇಶ್ ಅವರ ಶಿಫಾರಸಿನ ಮೇರೆಗೆ ಈ ನೇಮಕಾತಿ ಮಾಡಲಾಗಿದೆ.
ನೂತನ ಪದಾಧಿಕಾರಿಗಳಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಕಾರ್ಮಿಕರ ಹಿತಾಸಕ್ತಿಯ ಪರವಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ನೇಮಕಗೊಂಡ ಪದಾಧಿಕಾರಿಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ, ಯಶಸ್ವಿ ಕಾರ್ಯನಿರ್ವಹಣೆಗೆ ಶುಭ ಹಾರೈಸಿದ್ದಾರೆ.


























