ವಿಟ್ಲ: ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ (ರಿ), ಮಂಗಳೂರು (ದ.ಕ. ಮತ್ತು ಉಡುಪಿ ಜಿಲ್ಲೆ) ವಿಟ್ಲ ವಲಯ ಹಾಗೂ ಯಕ್ಷಭಾರತ ಸೇವಾ ಪ್ರತಿಷ್ಠಾನ (ರಿ) ಮತ್ತು ಭಾರತ ಅಡಿಟೋರಿಯಂ, ಚಂದ್ರಕಲಾ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನವನ್ನು ಜುಲೈ 21, 2026, ಮಂಗಳವಾರ ಚಂದಳಿಕೆಯ ಭಾರತ್ ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ವಲಯದ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ಲಿಯೋ ಡಿ ಲಸ್ರದೋ ವಹಿಸಲಿದ್ದು, ಉದ್ಘಾಟನೆಯನ್ನು ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಸ್ಥಾಪಕರಾದ ಜನಾರ್ದನ ಆಳ್ವ ಅತ್ತಾವರ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ,ಬಂಟ್ವಾಳದ ಕಾರ್ಮಿಕ ನಿರೀಕ್ಷಕರಾದ ಲವಿನಾ ಡಿಸೋಜಾ,ಗ್ಯಾರೇಜ್ ಮಾಲಕರ ಸಂಘ ಮಂಗಳೂರಿನ ಅಧ್ಯಕ್ಷರಾದ ದಿನಕರ ಕುಲಾಲ್, ಉದ್ಯಮಿಗಳಾದ ಡಿ. ಸಂಜೀವ ಪೂಜಾರಿ ಹಾಗೂ ಗೀತಾ ಜುವೆಲ್ಲರ್ಸ್ ಮಾಲಕ ಪ್ರಭಾಕರ ಆಚಾರ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.


























