ಇಂದಬೆಟ್ಟು: ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಕಜೆ ಎಂಬಲ್ಲಿ ನಿಧಿಗಾಗಿ ಶೋಧ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
(ಜು.19)ನಿನ್ನೆ ರಾತ್ರಿ ಕಜೆ ಹೊನ್ನಪ್ಪ ಗೌಡ ಅವರ ಜಾಗದಲ್ಲಿ ನಿಧಿಗಾಗಿ ಶೋಧ ಕಾರ್ಯ ನಡೆಸಿರುವುದು ಕಂಡು ಬಂದಿದೆ. ಗುಡ್ಡದಲ್ಲಿ ನಿಧಿಗಾಗಿ ಶೋಧ ನಡೆಸಿರುವ ಕುರುಹು ಪತ್ತೆಯಾಗಿದೆ.ಅವರ ಮಗ ಸುದರ್ಶನ ಗೌಡ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

























