ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೊಸೆಯೊಬ್ಬರು ಜೀವ ಬೆದರಿಕೆ ಹಾಕಿ, ಮನೆಯ ಕಿಟಕಿ ಗಾಜಿಗೆ ಕಲ್ಲೆಸೆದು ಹಾನಿ ಮಾಡಿರುವುದಲ್ಲದೆ, ಕಲ್ಲಿನಿಂದ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ 70 ವರ್ಷದ ವೃದ್ಧೆಯೊಬ್ಬರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಡಬದ ಕೊಯಿಲ ನಿವಾಸಿ ನೀಲಮ್ಮ (70) ದೂರು ನೀಡಿದವರು. ಅವರ ಸೊಸೆ ಮಂಗಳಾ ಬಾಯಿ ಅವರು ಅ.12ರಂದು ಸಂಜೆ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದರು. ಬಳಿಕ ಅ.14ರಂದು ರಾತ್ರಿ ಮನೆಯ ಕಿಟಕಿ ಗಾಜಿಗೆ ಕಲ್ಲೆಸೆದು ಹಾನಿ ಮಾಡಿದ್ದು, ಸುಮಾರು ₹30 ಸಾವಿರ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಕಲ್ಲು ತಗುಲಿ ನೀಲಮ್ಮ ಅವರಿಗೆ ಗಾಯವಾಗಿದ್ದು, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಗಾಯಗೊಂಡ ನೀಲಮ್ಮ ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026ರಂತೆ ಬಿಎನ್ಎಸ್ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

























