ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ಕೆಮ್ಮಾರದ ಉಜ್ಜೀವನ ಹಿರಿಯ ನಾಗರಿಕರ ಬಡಾವಣೆಯಲ್ಲಿ ‘ನವರಾತ್ರಿ ಆಯುಧ ಪೂಜೆ’ ದಿನಾಂಕ 19-10-2026ರಂದು ಜರುಗಿತು. ಪೂಜೆಯ ಪ್ರಯುಕ್ತ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಮಾಯಾ ಮೃಗ’ ಎಂಬ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ದ್ವಾರಕಾ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಲಕ್ಷ್ಮೀ ಅಮ್ಮನವರು ಉದ್ಘಾಟನೆಗೊಳಿಸಿದರು. ಬಳಿಕ ಶ್ರೀ ರಜಾಕ್ ಪುತ್ತೂರು ಮತ್ತು ಶ್ರೀ ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನಿರ್ಮಾಣಗೊಂಡ ಉಜ್ಜೀವನದ ಕುರಿತ ಕಿರುಚಿತ್ರ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಾಹನಗಳಿಗೆ ಪೂಜೆ, ಆಯುಧ ಪೂಜೆ ವೇದಮೂರ್ತಿ ಶ್ರೀ ಕೃಷ್ಣಕುಮಾರ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು. ಪಟಾಕಿ-ಸುಡು ಮದ್ದಿನ ಪ್ರದರ್ಶನ, ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಗ್ರಾಹಕರು, ಹಿತೈಷಿ-ಬಂಧುಗಳು, ಸ್ಥಳೀಯರು ಉಪಸ್ಥಿತರಿದ್ದರು.


























