ಮಂಗಳೂರು: ಮಂತ್ರಾಲಯಕ್ಕೆ ತೆರಳಿದ್ದ ಮಂಗಳೂರು ಮೂಲದ ತಂಡದ ಎರಡು ಕಾರುಗಳ ಪೈಕಿ ಒಂದು ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಹಾಗೂ ಹಲವರಿಗೆ ಗಾಯಗಳಾದ ಘಟನೆ ನಡೆದಿದೆ.
ಮೃತರನ್ನು ಮಂಗಳೂರು ಅಶೋಕನಗರ ನಿವಾಸಿ ಯಕ್ಷ ಧ್ರುವ ಫೌಂಡೇಶನ್ರ ನ ಕಾರ್ಯದರ್ಶಿ ರವಿ ಶೆಟ್ಟಿ (50) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಪುರುಷೋತ್ತಮ ಭಂಡಾರಿ, ಸಂದೇಶ್ ರೈ, ಪ್ರದೀಪ್ ಆಳ್ವ ಎಂದು ತಿಳಿದು ಬಂದಿದೆ.
ತಿರುಪತಿ ಬಳಿಕ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


























