ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 22 ಶಾಖೆಗಳೊಂದಿಗೆ
ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ
ಶಾಖೆಯು ದಿನಾಂಕ 29-08-2026ರಂದು ನೆಲ ಮಹಡಿ, ಕಣಿಯೂರು ಕಾಂಪ್ಲೆಕ್ಸ್,
ಸಿದ್ದಕಟ್ಟೆಯಲ್ಲಿ ಶುಭಾರಂಭಗೊಳ್ಳಲಿದೆ. ನೂತನ ಶಾಖೆಯನ್ನು ಸನ್ಮಾನ್ಯ ಶ್ರೀ ರಾಜೇಶ್ ನಾಯ್ಕ್
ಉಳಿಪ್ಪಾಡಿ, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಇವರ ಸಭಾಧ್ಯಕ್ಷತೆಯಲ್ಲಿ ಮಂಗಳೂರು
ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಹರೀಶ್ ಪೂಂಜಾ, ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಶ್ರೀ ಅಭಯ
ಚಂದ್ರ ಜೈನ್ ಮಾಜಿ ಸಚಿವರು, ಕರ್ನಾಟಕ ಸರಕಾರ, ವೇದಮೂರ್ತಿ ಶ್ರೀ ಪ್ರಕಾಶ್ ಅಸ್ರಣ್ಣ ಪ್ರಧಾನ
ಅರ್ಚಕರು, ಪೂಂಜ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಪ್ರಭಾಕರ ಪ್ರಭು ಅಧ್ಯಕ್ಷರು,
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ಶ್ರೀ ಸುರೇಶ್ ಶೆಟ್ಟಿ ವಕೀಲರು
ಮತ್ತು ನೋಟರಿ, ಸಿದ್ದಕಟ್ಟೆ, ಶ್ರೀ ವಸಂತ್ ಅಣ್ಣಳಿಕೆ ಸದಸ್ಯರು ರಬ್ಬರ್ ಬೋರ್ಡ್, ಭಾರತ
ಸರಕಾರ, ಶ್ರೀ ಮೈಕಲ್ ಡಿ ಕೋಸ್ತಾ ಸ್ಥಾಪಕಾಧ್ಯಕ್ಷರು, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ
ಇವರು ಭಾಗವಹಿಸಲಿದ್ದಾರೆ.
೨೦೦೧ರಲ್ಲಿ ಕಾರ್ಯಾರಂಭಗೊಂಡ ಸಹಕಾರಿಯು ಪ್ರಸಕ್ತ ರಜತ ಮಹೋತ್ಸವ ವರ್ಷಾಚರಣೆ
ಮಾಡುತ್ತಿದೆ. ಸಹಕಾರಿಯು ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶದ
ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್, ಸೇಫ್‌ಲಾಕರ್ ಸೌಲಭ್ಯವನ್ನು
ಸದಸ್ಯರಿಗೆ ನೀಡುತ್ತಿದೆ. ಸಹಕಾರಿಯು ಆರಂಭದಿಂದಲೂ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು
ದಿನಾಂಕ 15-08-2026 ರಂತೆ 53487 ಸದಸ್ಯರನ್ನು ಹೊಂದಿದ್ದು ರೂ. 438 ಕೋಟಿ
ಠೇವಣಾತಿಯನ್ನು ಸಂಗ್ರಹಿಸಿ ರೂ. 400 ಕೋಟಿ ಸಾಲ ವಿತರಿಸಿ ರೂ 838ಕೋಟಿ ವ್ಯವಹಾರವನ್ನು
ದಾಖಲಿಸಿದೆ. 2026 ಮಾರ್ಚ್ ವರ್ಷಾಂತ್ಯಕ್ಕೆ ರೂ.7.27ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ.
2025-26ನೇ ಸಾಲಿನಲ್ಲಿ ಶೇ 13% ಡಿವಿಡೆಂಡ್ ವಿತರಿಸಲಾಗಿದೆ. ನಗುಮೊಗದ ತ್ವರಿತ ಹಾಗೂ
ಗ್ರಾಹಕ ಸ್ನೇಹೀ ಸೇವೆಗೆ ಹೆಸರಾದ ಸಹಕಾರಿಯಲ್ಲಿ ಪ್ರಸ್ತುತ 115 ಜನ ಸಿಬ್ಬಂದಿಗಳು ಸದಸ್ಯರ
ಸೇವೆಯಲ್ಲಿ ನಿರತರಾಗಿದ್ದಾರೆ.
ಸಹಕಾರಿಯು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಸೇವಾ ಕಾರ್ಯದ
ಭಾಗವಾಗಿ 2015ರಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿ ಇದರ ಮೂಲಕ
ಆಶಕ್ತರಿಗೆ ಆರ್ಥಿಕ ನೆರವು, ವಿವಿಧ ಪುಸ್ತಕಗಳ ಬಿಡುಗಡೆ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು,
ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಟ್ಟೆಯ ಕೈಚೀಲ ವಿತರಣೆ, ತರಕಾರಿ ಬೀಜ ವಿತರಣೆ, ಆರೋಗ್ಯ
ಮಾಹಿತಿ ಶಿಬಿರ, ಶಾಲಾ ಕಾಲೇಜುಗಳಿಗೆ ವಿವಿಧ ಕೊಡುಗೆಗಳು, ಮಾಹಿತಿ ಕಾರ್ಯಾಗಾರಗಳು ಸೇರಿದಂತೆ
ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಈವರೆಗೆ ಸುಮಾರು ರೂ.2 ಕೋಟಿಗೂ
ಮಿಕ್ಕಿ ವೆಚ್ಚದ ಸೇವಾ ಕಾರ್ಯಗಳನ್ನು ನಡೆಸಿರುತ್ತದೆ.
ಸದಸ್ಯರು ನೂತನ ಶಾಖೆಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸಿ ಸಹಕಾರಿಯ ಪ್ರಗತಿಗೆ
ಕೈಜೋಡಿಸುವಂತೆ ಸಹಕಾರಿಯ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.




























