ಬಂಟ್ವಾಳ : ಶಿವಗಿರಿ ಮಹಿಳಾ ಸಹಕಾರ ಸಂಘ (ನಿ), ಮೆಲ್ಕಾರ್ –ಪಾಣೆಮಂಗಳೂರು ಇದರ ಆಡಳಿತ ಮಂಡಳಿಯ ಚುನಾವಣೆಯು ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷೆಯಾಗಿ ಶ್ರೀಮತಿ ಜಯಂತಿ ವಿ. ಪೂಜಾರಿ ಅವರು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾವತಿ ಶ್ರೀನಿವಾಸ್ ಆಯ್ಕೆಯಾಗಿದ್ದು, ನಿರ್ದೇಶಕ ಮಂಡಳಿಗೆ ಶ್ರೀಮತಿ ಅಭಿನಯ ಚಿದಾನಂದ, ಶ್ರೀಮತಿ ಜ್ಯೋತಿಲಕ್ಷ್ಮಿ ರಾಜೇಶ್, ಶ್ರೀಮತಿ ವನಿತಾ ಕೂಸಪ್ಪ, ಶ್ರೀಮತಿ ತುಳಸಿ ಪುರಂದರ, ಶ್ರೀಮತಿ ಶ್ವೇತಾ ಡಿ. ಪೂಜಾರಿ, ಶ್ರೀಮತಿ ಧನಲಕ್ಷ್ಮೀ ಮಿಥುನ್, ಶ್ರೀಮತಿ ಪ್ರಮೀಳಾ ಮನೋಜ್ ಹಾಗೂ ಶ್ರೀಮತಿ ವಿನೋದ ಆನಂದ ಪೂಜಾರಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ನಿರ್ದೇಶಕರು ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಆಡಳಿತವನ್ನು ನಿರ್ವಹಿಸಲಿದ್ದಾರೆ. ನೂತನ ಆಡಳಿತ ಮಂಡಳಿಗೆ ಸದಸ್ಯರು ಹಾಗೂ ಹಿತೈಷಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.



























