ಕುಂದಾಪುರ: ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿ ಕುಂದಾಪುರ ಜೂನಿಯರ್ ಕಾಲೇಜ್ ಪರಿಸರದಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಇಬ್ಬರನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದ್ದು, ಮೂವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಂಗೊಳ್ಳಿಯ ಹಾಜಿ ಅಬ್ದುಲ್ ಮಜೀದ್ ಪ್ರಾಯ (32) ಹಾಗು ರಜಬ್ (41) ಬಂಧಿತರಾಗಿದ್ದು, ಖಲೀಲ್, ರಿಜ್ವಾನ್ ಹಾಗೂ ಇಫ್ತೀಕರ್ ಪರಾರಿಯಾದವರು ಎನ್ನಲಾಗಿದೆ.
ಆಪಾದಿತ ಹಾಜಿ ಅಬ್ದುಲ್ ಮಜೀದ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು ದಾಖಲಾಗಿದ್ದು ಅಲ್ಲದೇ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುತ್ತಾನೆ.
ಆಪಾದಿತ ರಜಬ್ ಈತನ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿತರು ಮತೀಯವಾಗಿ ಕೋಮು ಸಂಘರ್ಷ ಉಂಟುಮಾಡುವ ಪ್ರವೃತ್ತಿಯವರಾಗಿದ್ದು ಮಾರಕಾಯುಧಗಳೊಂದಿಗೆ ಅಕ್ರಮ ಕೂಟ ಸೇರಿ ಹಠಾತ್ ಪ್ರಚೋದನೆಯಿಂದ ಮಾರಕಾಯುಧಗಳನ್ನು ಬೀಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.