ಪುತ್ತೂರು: ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಕೊಂಬೆ ಬಿದ್ದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಎನ್ನಲಾಗಿದೆ.
ಭಾತಿಷ್ ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಭಾತಿಷ್ ಸ್ಪೋರ್ಟಿಂಗ್ ರೆಂಜಲಾಡಿ ತಂಡದ ಆಟಗಾರರಾಗಿದ್ದರು.
ಮೃತರು ತಾಯಿ, ಪತ್ನಿ, 6 ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ 3 ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.