ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲಡ್ಕ ವಲಯದ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಬೋಳಂತೂರಿನ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಹತ್ತಿರ ಇರುವ ಕಟ್ಟಡದಲ್ಲಿ ಫೆ.9ರಂದು ಉದ್ಘಾಟನೆಗೊಂಡಿತು.
ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ರಿಬ್ಬನ್ ಕಟ್ ಮಾಡಿ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.
ಬೋಳಂತೂರು ಒಕ್ಕೂಟದ ಅಧ್ಯಕ್ಷೆ ಸೀತಾ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಸೇವಾಕೇಂದ್ರದ ಬಗ್ಗೆ ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ ರೈ, ಒಕ್ಕೂಟದ ಪದಾಧಿಕಾರಿಗಳು ತಂಡದ ಸದಸ್ಯರುಗಳು ಉಪಸ್ಥಿತರಿದ್ದರು . ಒಕ್ಕೂಟದ ಸೇವಾಪತ್ರಿನಿಧಿ ಲೀಲಾವತಿ ಸ್ವಾಗತಿಸಿ, ಗೋಳ್ತಮಜಲು ಒಕ್ಕೂಟದ ಸೇವಾಪ್ರತಿನಿಧಿ ಕೌಶಿತಾ ವಂದಿಸಿದರು.