ವಿಟ್ಲ: ವಿದ್ಯಾರ್ಥಿಗಳ ತಂಡವೊಂದು ದಾಳಿ ನಡೆಸಿ ಓರ್ವ ಗಾಯಗೊಂಡ ಘಟನೆ ವಿಟ್ಲ ಶಾಲೆಯಲ್ಲಿ ನಡೆದಿದೆ.
ಖಾಸಗಿ ಶಾಲೆಯಲ್ಲಿ 5 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಕೆಲವು ವಿದ್ಯಾರ್ಥಿಗಳನ್ನು ಭಯಗೊಳಿಸುವ ಕಾರ್ಯ ನಡೆಸುತ್ತಿದ್ದು, ಈ ಘಟನೆ ಶುಕ್ರವಾರ ತಾರಕಕ್ಕೆ ಹೋಗಿ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಆಡಳಿತ ಮತ್ತು ಶಿಕ್ಷಕ ವೃಂದ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ್ದಾರೆ ಎನ್ನಲಾಗಿದೆ.