ಉಡುಪಿ: ವಿದೇಶಗಳಿಂದ ಹಾಗೂ ಸ್ಥಳೀಯ ಕೆಲ ನಂಬರ್‌ಗಳಿಂದ ನಿರಂತರವಾಗಿ ಇಂಟರ್ನೆಟ್ ಕಾಲ್ ಮಾಡಿ ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಗೃಹಸಚಿವರಿಗೆ ಮೌಖಿಕವಾಗಿ ಮಾಹಿತಿ ನೀಡಿರುವ ರಘುಪತಿ ಭಟ್, ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಎಂದು ವಿದೇಶ ಸ್ಥಳೀಯ ಕೆಲ ನಂಬರ್ ಗಳಿಂದ ನಿರಂತರ ಫೋನ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇಂಟರ್ನೆಟ್ ಕಾಲ್ ಮೂಲಕ ಹಲವರು ಬೆದರಿಸುತ್ತಿದ್ದಾರೆ. ಹೈದರಾಬಾದ್ ನಿಂದ ಫೋನ್ ವಾಟ್ಸಪ್ಪ್ ಫೇಸ್ಬುಕ್ ಮೂಲಕ ಥ್ರೆಟ್ ಹಾಕುತ್ತಿದ್ದಾರೆ. ನಾನು ಸಮವಸ್ತ್ರ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಚರ್ಚೆ ಮಾಡಿಲ್ಲ ಮಾತನಾಡಿಲ್ಲ ಎಂದು ಹೇಳಿದ್ದಾರೆ.