ಹಳೆಯಂಗಡಿ: ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ಪಾವಂಜೆ ಸೇತುವೆ ಮೇಲೆ ಬೈಕ್ ನಿಲ್ಲಿಸಿ ಇಂಜಿನಿಯರ್ ಓರ್ವ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್‌ನನ್ನು ಶಿವಮೊಗ್ಗ ಮೂಲದ ಸುಚೇಂದ್ರ ಕುಮಾರ್(39) ಎಂದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ ಇಂಜಿನಿಯರ್ ಆಗಿ ವೃತ್ತಿ ಮಾಡಿಕೊಂಡಿದ್ದ ಸುಚೇಂದ್ರರ ಪತ್ನಿಯ ಮನೆ ಚೇಳ್ಯಾರಿನಲ್ಲಿದೆ. ಬುಧವಾರ ಬೆಳಿಗ್ಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. 12 ಗಂಟೆಯ ಸುಮಾರಿಗೆ ಸೇತುವೆಯಿಂದ ಹಾರಿದ ಮಾಹಿತಿ ಬಂದಿದ್ದು ಸ್ಥಳಕ್ಕೆ ಧಾವಿಸಿದ ಮೂಲ್ಕಿ ಪೊಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ.
ವರ್ಕ್ ಫ್ರಂ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ.