ಪುತ್ತೂರು: ಮೊಬೈಲ್, ಪರ್ಸ್ ಮನೆಯಲ್ಲೇ ಬಿಟ್ಟು ರಿಕ್ಷಾದಲ್ಲಿ ಬಾಡಿಗೆಗೆಂದು ತೆರಳಿದ್ದ ಬಲ್ನಾಡು ಉಜ್ರುಪಾದೆ ನಿವಾಸಿ ಆಟೋ ರಿಕ್ಷಾ ಚಾಲಕ ಸುಂದರ ಪಿ ರವರ ಮೃತದೇಹ ಬಲ್ನಾಡಿನ ಮಚ್ಚಿಮಲೆ ಬೊಲ್ಲಾಣ ರಸ್ತೆಯ ಮಧ್ಯೆ ಅವರ ರಿಕ್ಷಾದಲ್ಲಿಯೇ ಫೆ.16 ರಂದು ಪತ್ತೆಯಾಗಿದೆ.
ಸುಂದರ ರವರು ಫೆ.13 ರಂದು ಮನೆಯಿಂದ ಆಟೋ ರಿಕ್ಷಾದಲ್ಲಿ ಬಾಡಿಗೆಗಾಗಿ ತೆರಳಿದ್ದು, ಮನೆಗೆ ಬಾರದ ಸುಂದರ ರವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ಮನೆಯಲ್ಲೇ ಇರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.