ಪುತ್ತೂರು : ಕಾಂಗ್ರೆಸ್ ಮುಖಂಡ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಕೂರ್ನಡ್ಕ ನಿವಾಸಿ ಡಿ.ಕೆ.ಅಬ್ದುಲ್ ರಹಿಮಾನ್ (64 ವ) ರವರು ಹೃದಯಾಘಾತದಿಂದ ಮೇ 25ರಂದು ರಾತ್ರಿ ಕೂರ್ನಡ್ಕದ ಮನೆಯಲ್ಲಿ ನಿಧನರಾದರು.
ಡಿ.ಕೆ. ಅಬ್ದುಲ್ ರಹಿಮಾನ್ ರವರು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಆಪ್ತರಾಗಿದ್ದು, ಜಿಲ್ಲಾ ಕಾಂಗ್ರೆಸ್ಸಿನ ಪದಾಧಿಕಾರಿಯಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ, ಕೆಮ್ಮಿಂಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮೂರು ಮಂದಿ ಪುತ್ರಿಯರನ್ನು, ಅಳಿಯಂದಿರನ್ನು ಆಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.



























