ಮಂಗಳೂರು: ದೇಶ ಮೊದಲು, ಧರ್ಮ ನಂತರ ಹೇಳಿಕೆ ನೀಡಿದ್ದ ಕೈ ನಾಯಕಿಗೆ ಸಂಕಷ್ಟ ಎದುರಾಗಿದೆ.
ದೇಶದಾದ್ಯಂತ ಚರ್ಚೆಯಾಗುತ್ತಿದ್ದ ಹಿಜಾಬ್ ವಿಚಾರದ ಕುರಿತಾಗಿ ವಿದ್ಯಾರ್ಥಿಗಳು ಗಲಭೆಗೆ ಅವಕಾಶ ಮಾಡದೆ ಶಾಂತಿ ಕಾಪಾಡಿ, ಶಿಕ್ಷಣ ಪಡೆಯಿರಿ ಎಂದು ಹೇಳಿಕೆ ನೀಡಿದ್ದ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಗೆ ಜೀವ ಬೆದರಿಕೆ ಕರೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಅಂಜುಮ್ ದೂರು ದಾಖಲಿಸಿದ್ದಾರೆ.
ದೇಶ ಧರ್ಮದ ವಿಚಾರ ಬಂದಾಗ ಕಾಂಗ್ರೆಸ್ ತತ್ವ ಸಿದ್ಧಾಂತದ ಪ್ರಕಾರ ನನಗೆ ದೇಶ ಮೊದಲು ಎಂದು ಸುರೈಯ್ಯ ಅಂಜುಮ್ ಕನ್ನಡದ ಹಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
ಇಸ್ಲಾಂ ಧರ್ಮದಲ್ಲಿ ಹುಟ್ಟಿ ಧರ್ಮ ಮೊದಲು ಹೇಳಿಲ್ಲವೆಂದು ಕೆಲ ಕಿಡಿಗೇಡಿಗಳು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಅಶ್ಲೀಲ ಪದಗಳ ಬಳಕೆ ಮಾಡಿ ಕಮೆಂಟ್ ಹಾಗೂ ಮೆಸೇಜ್ ಮಾಡಿದ್ದು ಜೀವ ಬೆದರಿಕೆ ಕರೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.