ಧರ್ಮಸ್ಥಳ: ಕನ್ಯಾಡಿಯ ಕೂಲಿ ಕಾರ್ಮಿಕ ದಿನೇಶ್ ನಾಯ್ಕ್ ಎಂಬವರ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಕನ್ಯಾಡಿಯ ಕಿಟ್ಟ ಯಾನೆ ಕೃಷ್ಣ ರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ರವರು ಫೆ 25ರ ನಸುಕಿನ ವೇಳೆ ಮೃತಪಟ್ಟಿದ್ದರು.
ಫೆ. 23 ರಂದು ಬೆಳಿಗ್ಗೆ ರಾಮ ಮಂದಿರದ ಮುಂಭಾಗದಲ್ಲಿ ಅಂಗಡಿಯೊಂದರ ಬಳಿ ಆರೋಪಿ ಕಿಟ್ಟ ಯಾನೆ ಕೃಷ್ಣ ಹಲ್ಲೆ ನಡೆಸಿದ್ದಾನೆಂದು ಆರೋಪ ವ್ಯಕ್ತವಾಗಿತ್ತು.
ಈ ಬಗ್ಗೆ ದಿನೇಶ್ ತಾಯಿ ಪದ್ಮಾವತಿಯವರು ಠಾಣೆಗೆ ದೂರು ನೀಡಿದ್ದರು. ಆರೋಪಿ ಕೃಷ್ಣ ನು ದಿನೇಶ್ ಮೇಲೆ ಹಾಡುಹಗಲೇ ಹಲ್ಲೆ ನಡೆಸಿ ಥಳಿಸುತ್ತಿದ್ದಾರೆ ಎನ್ನಲಾದ ಸಿಸಿಟಿವಿ ವಿಡಿಯೋವೊಂದು ವೈರಲ್ ಆಗಿತ್ತು.
ಕೊಲೆ ಪ್ರಕರಣ ದಾಖಲಾಗುತ್ತಲೇ ಕೃಷ್ಣ ತಲೆಮರೆಸಿಕೊಂಡಿದ್ದು, ಆರೋಪಿಯ ಅಡಗುತಾಣವನ್ನು ಶೋಧಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.