ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಯ ಹಿನ್ನೆಲೆ ರಸ್ತೆ ಮಧ್ಯೆ ಅಗೆದಿದ್ದ ಹೊಂಡಕ್ಕೆ ಕಾರೊಂದು ಬಿದ್ದ ಘಟನೆ ಕೋಡಿಯಾಲ್ ಗುತ್ತು ಬಳಿ ನಡೆದಿದೆ.
ಕೋಡಿಯಾಲ್ ಗುತ್ತು ಬಳಿ ರಸ್ತೆ ಬದಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿಗಾಗಿ ಗುಂಡಿ ಅಗೆಯಲಾಗಿತ್ತು. ಇಂದು ಬೆಳಿಗ್ಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಈ ಗುಂಡಿಗೆ ಬಿದ್ದಿದೆ.
ಅಪಘಾತದಿಂದಾಗಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.