ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಹಿಂದುತ್ವಕ್ಕೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕೇರಳ ಗಡಿ ಭಾಗದಲ್ಲಿ ಜೋ ಬಾಯ್ ಎಂಬ ಹೆಸರಿನಲ್ಲಿ ಪ್ರಸಿದ್ದಿ ಪಡೆದ ಜ್ಯೋತಿಷ್ ಕಾಸರಗೋಡು ಹಾಗೂ ದುಷ್ಕರ್ಮಿಗಳಿಂದ ಕೊಲೆಯಾದ ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಪೆರುವಾಯಿಯಲ್ಲಿ ಹಮ್ಮಿಕೊಳ್ಳಲಾಯಿತು. ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಸಭಾವೇದಿಕೆಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೇಲ್ ರವರು ನುಡಿನಮನ ಸಲ್ಲಿಸಿದರು. ಬಜರಂಗದಳ ಪ್ರಖಂಡ ಸಂಚಾಲಕರಾದ ಚಂದ್ರಹಾಸ್ ಕನ್ಯಾನ, ಹಿರಿಯ ಭಾಜಪ ಪ್ರಮುಖರಾದ ಗೋಪಾಲಕೃಷ್ಣ ಶೆಟ್ಟಿ ಸೇನರಪಾಲು,ಅಧ್ಯಕ್ಷರಾದ ಶೇಖರ ಪೂಜಾರಿ ಕುಂಬಳಕೋಡಿ , ಬಜರಂಗದಳ ಪೆರುವಾಯಿ ಘಟಕದ ಸಂಚಾಲಕರಾದ ಮೋಕ್ಷಿತ್ ಪೆರುವಾಯಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ ಅಶ್ವಥನಗರ ರವರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು. ಬಜರಂಗದಳ ಪ್ರಮುಖರಾದ ಯತೀಶ್ ಪೆರುವಾಯಿ ಸ್ವಾಗತಿಸಿದರು. ಭಾಜಪ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಭಾಜಪದ ಪ್ರಮುಖರು, ಸಂಘಟನೆ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



























