ಉಳ್ಳಾಲ: ಜಾತ್ರೆಗೆಂದು ದೊಡ್ಡಮ್ಮನ ಮನೆಗೆ ಬಂದ ಅವಿವಾಹಿತ ಯುವಕನೊಬ್ಬ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕಾಶ್ ನಗರ ಎಂಬಲ್ಲಿ ನಡೆದಿದೆ
ಮೃತ ಯುವಕನನ್ನು ಮಂಗಳೂರು ಪಡೀಲು ನಿವಾಸಿ ಸೌರವ್ (21)ಎನ್ನಲಾಗಿದೆ.
ಸೌರವ್ ಶನಿವಾರ ಮತ್ತು ಆದಿತ್ಯವಾರದಂದು ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಪಂಜಂದಾಯ ದೈವದ ದೊಂಪದ ಬಲಿ ಉತ್ಸವಕ್ಕೆಂದು ತಾಯಿ ಜತೆ ದೊಡ್ಡಮ್ಮನ ಮನೆಗೆ ಬಂದಿದ್ದು, ರವಿವಾರ ಮಧ್ಯಾಹ್ನದಿಂದ ಸಂಜೆಯವರೆಗಿನ ಮಧ್ಯದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ,ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ. ಮೃತ ಸೌರವ್ ಅವಿವಾಹಿತನಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.