ಮಂಗಳೂರು: ಮೂಡುಶೆಡ್ಡೆಯಲ್ಲಿರುವ ಕಂಪನಿಯೊಂದರ ಉದ್ಯೋಗಿ ಕುಲಶೇಖರ ನಿವಾಸಿ ಮನೀಶ್ ಎನ್ನುವವರು ಕೆಲಸ ಮುಗಿಸಿ ಮನೆ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಕುಲಶೇಖರ ಬಳಿ ಮನೀಶ್ ನನ್ನು ಅಡ್ಡಗಟ್ಟಿದ ಮೂವರು ಅಪರಿಚಿತರು ಸ್ಕೂಟರನ್ನು ತಳ್ಳಿ ಹಾಕಿ ಹಲ್ಲೆ ನಡೆಸಿದ್ದಲ್ಲದೆ ಚಾಕು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದರು.
ಹಣ ನೀಡದೆ ಪ್ರತಿರೋಧ ಒಡ್ಡಿದಾಗ ದ್ವಿಚಕ್ರ ವಾಹನ, 1000 ರೂಪಾಯಿ ನಗದು ಹೊಂದಿದ್ದ ಬ್ಯಾಗ್, ಅಗತ್ಯ ದಾಖಲೆ ಪತ್ರಗಳು ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡ ಮನೀಶ್ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಕಂಕನಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.