ಹಾಸನ: ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ (Murder) ಆಗಿದೆ. ಹಂತಕರು ಮನೆಯ ಬಳಿಯೇ ಕೊಚ್ಚಿ ಕೊಂದು ಎಸ್ಕೇಪ್ (Escape) ಆಗಿದ್ದಾರೆ. ಗ್ರಾಮದ ಗುರುಪ್ರಸಾದ್ ಪತ್ನಿ ರೇವತಿ(35) ಕೊಲೆಯಾದ ಮಹಿಳೆ.
ಮನೆಯಲ್ಲಿ ಪತಿ ಹಾಗು ಮಕ್ಕಳು ಇಲ್ಲದ ವೇಳೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಕೊಚ್ಚಿ ಕೊಂದಿರುವ ಶಂಕೆ ಮೂಡಿದೆ. ಮಹಿಳೆ ಸಂಜೆ ಮನೆ ಹೊರಗೆ ಬಟ್ಟೆ ತೊಳೆಯುತ್ತಾ ಕುಳಿತಿದ್ದರು. ಆಗ ಆಕೆಯ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಎಸ್ಪಿ ಡಾ.ನಂದಿನಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.