ದಿ ಕಾಶ್ಮೀರ್ ಫೈಲ್ಸ್ ಚಿತ್ರ ಇಡೀ ದೇಶದ ಮನೆ ಮಾತಾಗ್ತಿದೆ. ಯಾರೂ ಊಹಿಸಲಾರದ ಮಟ್ಟಿಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು, ಚಿಕ್ಕ ಚಿತ್ರವಾಗಿದ್ದರೂ ಕೇವಲ 6 ದಿನದಲ್ಲಿ ನೂರು ಕೋಟಿ ರೂಪಾಯಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಈ ನಡುವೆ ದಿ ಕಾಶ್ಮೀರ ಫೈಲ್ಸ್ ಮೂಲಕ ಕಾಶ್ಮೀರಿ ಪಂಡಿತರ ನೋವಿನ ಸತ್ಯ ಘಟನೆ ತೆರದಿಟ್ಟ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಹಾಗೂ ಕುಟುಂಬಕ್ಕೆ ಪ್ರಾಣ ಬೆದರಿಕೆ ಕೂಡ ಹೆಚ್ಚಿದೆ ಅಂತ ಕೇಂದ್ರಕ್ಕೆ ಗುಪ್ತಚರ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ನೀಡಲಾಗ್ತಿದೆ.
ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಸದ್ಯ ಕೇಂದ್ರ ಸರ್ಕಾರ Y ಕೆಟಗರಿ ಭದ್ರತೆಯನ್ನು ನೀಡುತ್ತಿದೆ.
ಕೇಂದ್ರ ಸರ್ಕಾರದ ಮೂಲದಿಂದ ಬಂದ ಮಾಹಿತಿ ಪ್ರಕಾರ, ವಿವೇಕ್ ಅಗ್ನಿ ಹೋತ್ರಿಗೆ ಇಡೀ ದೇಶದಲ್ಲಿ ಸಿಆರ್ಪಿಎಫ್ ಜೊತೆಗೆ ವೈ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ದ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಕೆಲಕಡೆ ತೀವ್ರ ವಿರೋಧ ವ್ಯಕ್ತವಾದ್ರೂ ಚಿತ್ರ ನೋಡುವವರ ಸಂಖ್ಯೆಯಂತೂ ದೊಡ್ಡ ಮಟ್ಟಕ್ಕೆ ಹೆಚ್ಚುತ್ತಿದೆ. ಚಿತ್ರದ ಶುರುವಾತಿನಲ್ಲಿ ಕೇವಲ 600 ಥಿಯೇಟರ್ಗಳಲ್ಲಿ ರಿಲಿಸ್ ಆಗಿದ್ದ ಈ ಚಿತ್ರ, ಇಂದು ಬರೋಬ್ಬರಿ 4 ಸಾವಿರ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ.