ವಿಟ್ಲ-ಮುಡಿಪು-ಮಂಗಳೂರು ಹಾಗೂ ವಿಟ್ಲ-ಬಿ.ಸಿ.ರೋಡು- ಮಂಗಳೂರು ಮಧ್ಯೆ ಸಂಚಾರ ನಡೆಸುತ್ತಿರೋ ಖಾಸಗಿ ಬಸ್ಸುಗಳ ಪೈಕಿ ಕೆಲವೊಂದಕ್ಕೆ ಇನ್ಸ್ಯೂರೆನ್ಸೂ ಇಲ್ಲ, ತೆರಿಗೆಯೂ ಪಾವತಿಸಿಲ್ಲ ಎಂಬ ಆಘಾತಕಾರಿ ಮಾಹಿತಿ ಇದೀಗ ಹೊರಬಿದ್ದಿದೆ.
ತೆರಿಗೆ, ಇನ್ಸ್ಯೂರೆನ್ಸ್ ವಂಚಿಸಿ ವಿಟ್ಲ-ಮುಡಿಪು-ಮಂಗಳೂರಿಗೆ ಓಡಾಡುತ್ತಿದ್ದ ಖಾಸಗಿ ಬಸ್ ಅನ್ನು ಸಾರಿಗೆ ಅಧಿಕಾರಿಗಳು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಂತಹ ಬಸ್ಸುಗಳೇನಾದರೂ ಅಪಘಾತಕ್ಕೀಡಾದರೆ ಪ್ರಯಾಣಿಕರ ಕುಟುಂಬವಂತೂ ಬೀದೀಪಾಲಾಗುವುದು ನೂರರಷ್ಟು ಸತ್ಯ. ತಮಗೆ ಬೇಕಾದ ಸಮಯಕ್ಕೆ ಓಡಾಟ ನಡೆಸುತ್ತಾ ಪ್ರಯಾಣಿಕರಿಗೆ ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತಿರುವ ಬಸ್ ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

























