ವಿಟ್ಲ: ದಯಾ ಕ್ರಿಯೇಷನ್ ಅರ್ಪಿಸುವ “ಸ್ಪೂರ್ತಿದ ಕಡಲ್ ಅಮ್ಮ” ಎಂಬ ಹೊಸ ತುಳು ಆಲ್ಬಮ್ ಸಾಂಗ್, ಶ್ರೀ ಕ್ಷೇತ್ರ ಕುಕ್ಕಾಜೆ ಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯ ಶುಭ ಆಶೀರ್ವಾದದಲ್ಲಿ ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ನಾಳೆ ಬಿಡುಗಡೆಗೊಳ್ಳಲಿದೆ.
“ಸ್ಪೂರ್ತಿದ ಕಡಲ್ ಅಮ್ಮ” ಎಂಬ ಈ ಹೊಸ ಆಲ್ಬಂ ಹಾಡಿಗೆ ಉಮನಾಥ್ ಕೋಟ್ಯಾನ್ ತೆಂಕಕಾರ ರವರು ಸಾಹಿತ್ಯ ಬರೆದಿದ್ದು, ಅಶ್ವಿನಿ ಪೆರುವಾಯಿ ಗಾಯನದಲ್ಲಿ ಮೂಡಿ ಬಂದಿರುವ ಈ ಆಲ್ಬಂ ಸಾಂಗ್‌ನ ನಿರ್ಮಾಣ ಉಷಾ ಆರ್ ಎಮ್. ಮಂಜುನಾಥ್ ಕೊಡ್ಲಾಮೊಗರು. ಮತ್ತು ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರ್. ಪ್ರಚಾರ ಕಲೆ&ಸಂಕಲನ ರಿತೇಶ್ ಸೂಪಲಚ್ಚಿಲ್ ನೀಡಿದ್ದಾರೆ.
ಈ ಹೊಸ ತುಳು ಆಲ್ಬಮ್ ಸಾಂಗ್ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.