ಮಂಗಳೂರು: ಇಂದು ದೇಶಾದ್ಯಂತ ಟೋಲ್‌ಪ್ಲಾಝಾಗಳಲ್ಲಿ ವಾಹನಗಳ ಸುಂಕ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊಡಿಸಿದೆ. ಇದೇ ವೇಳೆ ಇಂದಿನಿಂದ (ಏ.1) ಕರಾವಳಿಯಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಂಕ ಹೆಚ್ಚಳವಾಗಿದೆ.
ಇದರ ಜೊತೆ ಕರಾವಳಿಯ ಎಲ್ಲಾ ಆರು ಟೋಲ್‌ಪ್ಲಾಜಾಗಳಲ್ಲಿ ಏ.1ರಿಂದ ವಾಹನದ ಸುಂಕದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಈಗಾಗಲೇ ಎನ್‌ಐಟಿಕೆ ಮತ್ತು ಬ್ರಹ್ಮರಕೂಟ್ಲು ಟೋಲ್‌ಗಳಲ್ಲಿ ಟೋಲ್ ದರ ಏರಿಕೆಯಾಗಿ ಪರವಾನಗಿ ಪರಿಷ್ಕೃತಗೊಂಡಿದೆ. ಉಳಿದಂತೆ ನವಯುಗದ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ವಾಹನ ಸುಂಕ ಸರಾಸರಿ ಶೇ.9ರಷ್ಟು ಏರಿಕೆ ಮಾಡಲಾಗಿದೆ ಎಂದು ಟೋಲ್ ಫ್ಲಾಜಾ ಗುತ್ತಿಗೆಯ ಪ್ರತಿನಿಧಿ ತಿಳಿಸಿದ್ದಾರೆ.