ಸುಬ್ರಹ್ಮಣ್ಯ: ಹಿಂದೂ ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯ ದೇವಳದ ಅಧೀನಕ್ಕೆ ಒಳಪಟ್ಟ ಜಾಗಗಳಲ್ಲಿ ಅನ್ಯಮತಿಯರದ್ದೇ ಕಾರುಬಾರು ಎಂದು ಹಿಂದೂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದು, ದೇವಳದ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ತೆರವುಗೊಳಿಸುವಂತೆ ಆಗ್ರಹಿಸಿದರು.
ದೇವಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಮತೀಯ ನೌಕರರನ್ನು ತಕ್ಷಣ ವರ್ಗಾವಣೆಗೊಳಿಸುವಂತೆ ಆಗ್ರಹಿಸಿದರು ಹಾಗೂ ರಥಬೀದಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಗೋ ಕಳವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಕಾನೂನು ಕ್ರಮ ಜರುಗಿಸದ್ದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿಂಜಾವೇ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ, ಹಿಂಜಾವೇ ಸುಳ್ಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿ, ವಿಹಿಂಪ ಅಧ್ಯಕ್ಷ ಅಶೋಕ ಆಚಾರ್ಯ, ಹಿಂಜಾವೇ ಗೌರವಾಧ್ಯಕ್ಷ ಅಚ್ಚುತ ಗೌಡ, ಮನೋಜ್ ಸುಬ್ರಹ್ಮಣ್ಯ, ಬಜರಂಗದಳ ಸಾಪ್ತಾಹಿಕ ಮಿಲನ್ ಸುನಿಲ್ ಕುಮಾರ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.