ವಿಟ್ಲ: ವ್ಯಕ್ತಿಯೋರ್ವ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಟ್ಲದ ಮಾಣಿ ಕೊಡಾಜೆ ಸಮೀಪ ನಡೆದಿದೆ.
ಗುಡ್ಡೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ 45ರ ಹೆರೆಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿದ್ದಾರೆ.
ಮೃತದೇಹದ ರವಾನೆ ಕಾರ್ಯ ನಡೆಯುತ್ತಿದ್ದು, ವ್ಯಕ್ತಿ 20ಕ್ಕೂ ಅಧಿಕ ದಿನಗಳ ಮೊದಲು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹ ಕೊಳೆತು ಶವ ಕೆಟ್ಟ ವಾಸನೆ ಬರುತ್ತಿತ್ತು.
ಸುಮಾರು 15 ದಿನಗಳ ಹಿಂದೆ ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದ್ದು, ಅಸ್ಥಿ ಎಲ್ಲಾ ಹೊರಗೆ ಬಂದು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ..
ಜೆಸಿಬಿ ಕೆಲಸದವರೊಬ್ಬರು ಮೂತ್ರ ವಿಸರ್ಜನೆಗೆಂದು ತೆರಳಿದಾಗ ಹೆಣ ನೋಡಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಕೊಳೆತು ವಾಸನೆ ಬರುತ್ತಿದ್ದ ಸ್ಥಿತಿಯಲ್ಲಿದ್ದ ಶವವನ್ನು ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಮತ್ತು ಪ್ರವೀಣ್ ಅನಂತಾಡಿ ಮತ್ತು ಸ್ಥಳೀಯರ ಸಹಕಾರದಿಂದ ತೆಗೆದು ದೇರಳಕಟ್ಟೆ ಶವಾಗಾರಕ್ಕೆ ಕಳುಹಿಸಲಾಗಿದೆ.