ವಿಟ್ಲ: ಹಿಂದೂ ನಾಮಧೇಯದಲ್ಲಿ ನಡೆಯುತ್ತಿರುವ ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಹಿಂದೂ ಸಂಘಟನೆಗಳು ‘ಹಲಾಲ್ ಹಠಾವೋ’ ಅಭಿಯಾನ ಪ್ರಾರಂಭಿಸಿದ್ದಾರೆ.
ಎ.17 ರಂದು ಪ್ರಾರಂಭಿಸಿದ ಅಭಿಯಾನದಲ್ಲಿ ವಿಟ್ಲ ಪೇಟೆಯ ಎಲ್ಲಾ ಹಿಂದೂ ಪರ ಹೋಟೆಲ್ ಗಳಿಗೆ ಭೇಟಿ ನೀಡಿದ ಹಿಂದೂ ಸಂಘಟನೆ ಪ್ರಮುಖರು ಮಾಲಕರಲ್ಲಿ ಮನವಿ ಮಾಡಿದರು.
ವ್ಯಾಪಾರದಲ್ಲಿ ಇಸ್ಲಾಂ ನಿಯಮಗಳ ಹೇರುವಿಕೆಯ ವಿರುದ್ಧ ಪ್ರಾರಂಭವಾಗಿರುವ ಈ ಅಭಿಯಾನಕ್ಕೆ ಎಲ್ಲಾ ಹಿಂದೂ ಹೋಟೆಲ್ ಮಾಲಕರು ಸಹಕರಿಸಬೇಕು ಎಂದು ತಿಳಿಸಿದ್ದು, ಈ ಬಗ್ಗೆ ಮಾಲಕರು ಉತ್ತಮ ಸ್ಪಂದನೆ ನೀಡಿರುವುದಾಗಿ ತಿಳಿದು ಬಂದಿದೆ.
ಹಲಾಲ್ ಹಠಾವೋ ಅಭಿಯಾನದಲ್ಲಿ ಹಿಂದೂ ಮುಖಂಡರಾದ ಅಕ್ಷಯ್ ರಜಪೂತ್, ಧನಂಜಯ ಸೇರ್ಕಳ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹೋಟೆಲ್ ಗಳಿಗೆ ಭೇಟಿ ನೀಡಿದರು.