ಹೊಸದಾಗಿ ಮದುವೆಯಾಗಿದ್ದ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಜೋಡಿಯ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದು ಯುವಕ ಸಾವನ್ನಪ್ಪಿರುವ ಘಟನೆ ಹೈದ್ರಾಬಾದ್ ನ ಎಲ್ ಬಿ ನಗರದಲ್ಲಿ ನಡೆದಿದೆ.

ಕಾಲೇಜು ಸಹಪಾಠಿಗಳಾದ ಬಿಲ್ಲಪುರಂ ನಾಗರಾಜು ಮತ್ತು ಸೈಯೆದ್ ಅಶ್ರಿನ್ ಸುಲ್ತಾನಾ ಇಬ್ಬರೂ ಪರಸ್ಪರ ಪ್ರೀತಿಸಿ ಈ ವರ್ಷ ಜನೆವರಿ ತಿಂಗಳಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಯುವತಿ ಸೈಯೆದ್ ಅಶ್ರಿನ್ ಸುಲ್ತಾನಾ ತನ್ನ ಹೆಸರನ್ನು ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತುಎನ್ನಲಾಗಿದೆ.

ನವ ದಂಪತಿ ಬುಧವಾರ ರಾತ್ರಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಅವರ ಮೇಲೆ ಇಬ್ಬರು ರಾಡ್ ನಿಂದ ಹಲ್ಲೆ ಮಾಡಿದ್ದರು. ಹಲ್ಲೆಯಲ್ಲಿ ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮದುವೆಯಾದ ಯುವತಿಯ ಸಹೋದರರೇ ಈ ಮರ್ಯದಾ ಹತ್ಯೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು ಪೋಲೀಸರು ಹೆಚ್ಚಿನ ತನಿಖೆ ಕೈಗೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ವರದಿಗಳು ತಿಳಿಸಿವೆ.