ಚ್ಯಾವನ್ಪ್ರಾಶ್ ಒಂದು ಒಳ್ಳೆಯ ರೋಗ ನಿರೋಧಕ ಶಕ್ತಿ ನೀಡುವ ಆಯುರ್ವೇದ ಔಷಧಿ. ಇದನ್ನು ಮನೆಯಲ್ಲೇ ತಯಾರಿಸಲು ಕಲಿಯಿರಿ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿದ್ದರೆ ಆಗ ಕೊರೋನಾದಂತಹ ಮಹಾಮಾರಿಯನ್ನು ಕೂಡ ದೂರ ಓಡಿಸಬಹುದು . ಇದಕ್ಕಾಗಿ ಭಾರತೀಯ ಆಯುರ್ವೇದ ಸಂಸ್ಥೆ ಮತ್ತು ಭಾರತೀಯ ಆಯುಷ್ ಮಂತ್ರಾಲಯವು ಈಗಾಗಲೇ ಪ್ರತಿರೋಧಕ ವೃದ್ಧಿಸುವಂತಹ ಕೆಲವೊಂದು ಕಷಾಯಗಳ ಬಗ್ಗೆ ಕೂಡ ಹೇಳಿದೆ. ಇದನ್ನು ಕುಡಿದರೆ ಅದರಿಂದ ಪ್ರತಿರೋಧಕ ಶಕ್ತಿ ವೃದ್ಧಿಸಬಹುದು.
ಕೆಲವೊಂದು ಸೋಂಕು ಹಾಗೂ ಋತು ಬದಲಾವಣೆ ವೇಳೆ ಕಾಡುವಂತಹ ವೈರಲ್ ಸೋಂಕಿನಿಂದ ರಕ್ಷಿಸಲು ದೇಹದಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗಿರಬೇಕು. ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿದ್ದರೆ ಆಗ ಇಂತಹ ಸಣ್ಣಪುಟ್ಟ ಸಮಸ್ಯೆಗಳು ನಮ್ಮ ದೇಹವನ್ನು ಕಾಡುವುದೇ ಇಲ್ಲ. ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಚ್ಯಾವನ್ಪ್ರಶ್ ಕೂಡ ಒಂದಾಗಿದೆ. ನಮ್ಮ ಹಿರಿಯರು ಹಿಂದಿನಿಂದಲೂ ಪ್ರತಿನಿತ್ಯ ಒಂದು ಚಮಚ ಚ್ಯಾವನ್ಪ್ರಾಶ್ ಸೇವಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗಿದೆ.
ಚ್ಯಾವನ್ಪ್ರಾಶ್ ಪ್ರತಿರೋಧಕ ವ್ಯವಸ್ಥೆಗೆ ಶಕ್ತಿ ನೀಡುವುದು ಮತ್ತು ಸಂಪೂರ್ಣ ಆರೋಗ್ಯವನ್ನು ಸುಧಾರಣೆ ಮಾಡುವುದು. ಪ್ರತಿನಿತ್ಯ ಬೆಳಗ್ಗೆ ಒಂದು ಚಮಚ ಚ್ಯಾವನ್ಪ್ರಾಶ್ ಸೇವಿಸಿದರೆ ಅದರಿಂದ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಮಾರುಕಟ್ಟೆಯಲ್ಲಿ ಹಲವಾರು ಕಂಪೆನಿಗಳ ಚ್ಯಾವನ್ಪ್ರಾಶ್ ಗಳು ಲಭ್ಯವಿದೆ. ಆದರೆ ಇದರಲ್ಲಿ ಹೆಚ್ಚಿನವುಗಳು ಬೇರೆ ವಸ್ತುಗಳನ್ನು ಮಿಶ್ರಣ ಮಾಡಿರಬಹುದು.ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಚ್ಯಾವನ್ಪ್ರಾಶ್ ನ ಲಾಭಗಳು ಚ್ಯಾವನ್ಪ್ರಾಶ್ ನಲ್ಲಿ ನೆಲ್ಲಿಕಾಯಿ, ಒಣದ್ರಾಕ್ಷಿ ಮತ್ತು ಖರ್ಜೂರವಿದ್ದು, ಇದು ವಿಟಮಿನ್ ಸಿ ಯ ಒಳ್ಳೆಯ ಮೂಲವೆಂದು ಪರಿಗಣಿಸಲಾಗಿದೆ. ವಿಟಮಿನ್ ಸಿ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಚಯಾಪಚಯ ಹೆಚ್ಚಿಸುವುದು.ಆಯುರ್ವೇದಿಕ್ ಗಿಡಮೂಲಿಕೆಗಳು ಮತ್ತು ಸಾಂಬಾರ ಪದಾರ್ಥಗಳು ಎಲ್ಲಾ ರೀತಿಯ ರೋಗಗಳಿಂದ ದೇಹವನ್ನು ರಕ್ಷಿಸುವುದು. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಚ್ಯಾವನ್ಪ್ರಾಶ್ ಸೇವಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ
ಮನೆಯಲ್ಲೇ ಚ್ಯಾವನ್ಪ್ರಾಶ್ ತಯಾರಿಸಿದರೆ ಇದು ತುಂಬಾ ಆರೋಗ್ಯಕಾರಿ ಮತ್ತು ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ನೀವು ಮನೆಯಲ್ಲೇ ಚ್ಯಾವನ್ಪ್ರಾಶ್ ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ: ಚ್ಯಾವನ್ಪ್ರಾಶ್ ಮಾಡಲು ಬೇಕಾಗುವ ಸಾಮಗ್ರಿಗಳು
ನೆಲ್ಲಿಕಾಯಿ-1/2 ಕೆಜಿ, ಒಣ ದ್ರಾಕ್ಷಿ- ಒಂದು ಹಿಡಿ, ಖರ್ಜೂರ (ಬೀಜ ತೆಗೆದು)-ಹತ್ತು, ದೇಶೀಯ ತುಪ್ಪ-100 ಗ್ರಾಂ, ಬೆಲ್ಲ-400 ಗ್ರಾಂ, ಕರಿಬೇವಿನ ಎಲೆ- 2 ಎಲೆಗಳು, ದಾಲ್ಚಿನಿ-1 ಸಣ್ಣ ತುಂಡು, ಒಣ ಶುಂಠಿ-10 ಗ್ರಾಂ, ಜಾಯಿಕಾಯಿ ಹುಡಿ-5 ಗ್ರಾಂ, ಹಸಿರು ಏಲಕ್ಕಿ(ಸಣ್ಣದು)-7-8, ಲವಂಗ-5 ಗ್ರಾಂ, ಕರಿ ಮೆಣಸು-5 ಗ್ರಾಂ, ಕೇಸರಿ-ಚಿಟಿಕೆಯಷ್ಟು, ಜೀರಿಗೆ-1 ಚಮಚ, ಪಿಪ್ಪಾಲಿ-10 ಗ್ರಾಂ(ಸುಲಭವಾಗಿ ಮಿಶ್ರಣವಾದರೆ) ಚಕ್ರಫಲ-1 ತುಂಡು.
ವಿಧಾನ: ಒಣ ಸಾಂಬಾರ(ಕರಿಬೇವು, ದಾಲ್ಚಿನಿ, ಒಣ ಶುಂಠಿ, ಜಾಯಿಕಾಯಿ, ಏಲಕ್ಕಿ, ಲವಂಗ, ಜೀರಿಗೆ, ಪಿಪ್ಪಾಲಿ, ಚಕ್ರಫಲ ಇತ್ಯಾದಿ)ಗಳನ್ನು ಸರಿಯಾಗಿ ರುಬ್ಬಿ ಹುಡಿ ಮಾಡಿಕೊಳ್ಳಿ. ನೆಲ್ಲಿಕಾಯಿಯನ್ನು ಸರಿಯಾಗಿ ತೊಳೆದುಕೊಂಡು ಅದನ್ನು ಸ್ವಚ್ಛ ಮಾಡಿದ ಬಳಿಕ ಕುಕ್ಕರ್ ನಲ್ಲಿ ಎರಡು ವಿಸಿಲ್ ಬರಲಿ. ನೆಲ್ಲಿಕಾಯಿಯನ್ನು ನೀರಿನಿಂದ ತೆಗೆದು ಬದಿಗೆ ಇಟ್ಟುಬಿಡಿ. ಬಿಸಿ ನೀರಿಗೆ ಒಣ ದ್ರಾಕ್ಷಿ ಮತ್ತು ಖರ್ಜೂರ ಹಾಕಿ ಮತ್ತು ಹಾಗೆ ಹತ್ತು ನಿಮಿಷ ಕಾಲ ಮುಚ್ಚಳ ಮುಚ್ಚಿಡಿ. ನೆಲ್ಲಿಕಾಯಿಯು ತಂಪಾದ ಬಳಿಕ ಅದನ್ನು ಕತ್ತರಿಸಿ ಬೀಜ ತೆಗೆಯಿರಿ. ನೆಲ್ಲಿಕಾಯಿ, ಒಣದ್ರಾಕ್ಷಿ ಮತ್ತು ಖರ್ಜೂರವನ್ನು ನೀವು ಮಿಕ್ಸರ್ ಗೆ ಹಾಕಿಕೊಳ್ಳಿ. ದ್ರಾಕ್ಷಿ ಮತ್ತು ಖರ್ಜೂರ ಹಾಕಿದಂತಹ ನೀರನ್ನು ಇದಕ್ಕೆ ಸ್ವಲ್ಪ ಹಾಕಿ ರುಬ್ಬಿಕೊಳ್ಳಿ. ಮೆತ್ತಗಿನ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ.(ಹೆಚ್ಚು ನೀರು ಹಾಕಿಕೊಳ್ಳಬೇಡಿ) ದೇಶೀಯ ತುಪ್ಪವನ್ನು ತವಾಗೆ ಹಾಕಿ ಹತ್ತು ನಿಮಿಷ ಕುದಿಸಿ. ಇದರ ಬಳಿಕ ಬೆಲ್ಲವನ್ನು ಇದೇ ತುಪ್ಪಕ್ಕೆ ಹಾಕಿ ಮತ್ತು ಅದನ್ನು ಕರಗಿ ನೀರಾಗಲಿದೆ. ನೆಲ್ಲಿಕಾಯಿ ಮತ್ತು ಖರ್ಜೂರದ ಪೇಸ್ಟ್ ನ್ನು ಇದಕ್ಕೆ ಹಾಕಿ ತಿರುಗಿಸಿ.
ಹದ ಬೆಂಕಿಯಲ್ಲಿ ನೀವು ಇದನ್ನು ಸರಿಯಾಗಿ ತಿರುಗಿಸುತ್ತಾ ಕುದಿಸಿ. 3-4 ನಿಮಿಷ ಬಳಿಕ ನೀವು ತಯಾರಿಸಿಕೊಂಡು ಗಿಡಮೂಲಿಕೆಗಳ ಹುಡಿ ಹಾಕಿ ಮತ್ತು ಸರಿಯಾಗಿ ತಿರುಗಿಸಿಕೊಳ್ಳಿ.
ಪೇಸ್ಟ್ ದಪ್ಪಗೆ ಅಂದರೆ ಚಮಚಕ್ಕೆ ಅಂಟಿಕೊಂಡ ಬಳಿಕ ನೀವು ಬೆಂಕಿ ನಂದಿಸಿಬಿಡಿ. ಇದನ್ನು ತಣ್ಣಗಾಗಲು ಬಿಡಿ. ಚ್ಯಾವನ್ಪ್ರಾಶ್ ಈಗ ತಯಾರಾಗಿದೆ. ಎಲ್ಲಾ ಸಾಮಗ್ರಿಗಳು ಲಭ್ಯವಿದ್ದರೆ ಆಗ ನಿಮಗೆ ಕೇವಲ 30 ನಿಮಿಷದಲ್ಲಿ ಇದನ್ನು ತಯಾರಿಸಿಕೊಳ್ಳಬಹುದು. ತಯಾರಾದ ಚ್ಯಾವಸ್ಪ್ರಾಶ್ ನ್ನು ಒಂದು ಡಬ್ಬದಲ್ಲಿ ಹಾಕಿ ಸರಿಯಾಗಿ ಮುಚ್ಚಳ ಮುಚ್ಚಿಡಿ. ದಿನಿನಿತ್ಯವೂ ಇದನ್ನು ಸೇವಿಸಿ.