ವಿಟ್ಲ: ಹಿಂದೂ ಯುವಕರ ಮೇಲೆ ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಡಗು ಸೋಮವಾರ ಪೇಟೆ ಕಲ್ಲಾರ ದೊಡ್ಡಕೋಡ್ಲಿ ನಿವಾಸಿ ಕೆ. ಮಹಮ್ಮದ್ ಶರೀಫ್(33), ವಿಟ್ಲ ಉಕ್ಕುಡ ದರ್ಬೆ ನಿವಾಸಿ ಸಾದಿಕ್(20) ಎನ್ನಲಾಗಿದೆ.

ಮೇ.14 ರಂದು ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಅಡ್ಯನಡ್ಕ ನಿವಾಸಿ ಗಿರೀಶ್ ಮತ್ತು ಮೈರ ನಿವಾಸಿ ರಕ್ಷಿತ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಗೆ ದೂರು ನೀಡಲಾಗಿತ್ತು.
ಈ ಬಗ್ಗೆ ಠಾಣೆಯಲ್ಲಿ ಅಕ್ರ: ನಂಬ್ರ: 75/2022 ಕಲಂ: 504, 324, 143, 147, 148, 307 ಜೊತೆಗೆ 149 ಬಾಧಂಸಂ ರಂತೆ ಪ್ರಕರಣ ದಾಖಲಾಗಿತ್ತು.