ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಬಾಬು ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ನಿರ್ಮಿಸಿದ್ದಾರೆ. ವೀರ ಕಂಬಳ ಅನ್ನೋ ಸಿನಿಮಾಗೆ ರಾಜೇಂದ್ರಬಾಬು ಆ್ಯಕ್ಷನ್ ಕಟ್ ಹೇಳಿದ್ದು, ಪ್ರಥಮ ಬಾರಿಗೆ ಕಂಬಳದ ರೆಕಾರ್ಡ್ ಮೇಕರ್ ಶ್ರೀನಿವಾಸ್ ಗೌಡ ಚಿತ್ರದಲ್ಲಿ ನಟಿಸಿದ್ದಾರೆ.

ಕಂಬಳದ ಸ್ಟಾರ್ ಕ್ರೀಡಾ ಪಟುಗಳು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಸುಮಾರು 20ಕ್ಕೂ ಹೆಚ್ಚು ಕಂಬಳದ ಕೋಣಗಳು ಚಿತ್ರದಲ್ಲಿ ಭಾಗಿಯಾಗಿವೆ. ಅರುಣ್ ರೈ ತೋಡಾರ್ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ್ದು, ಐದು ಭಾಷೆಗಳಲ್ಲಿ ಡಬ್ ಮಾಡಿ ಪ್ಯಾನ್ ಇಂಡಿಯಾ ಲೆವಲ್ನಲ್ಲಿ ರಿಲೀಸ್ ಮಾಡೋ ಯೋಜನೆಯಲ್ಲಿದ್ದಾರೆ.

ಆದಿತಿ ಸಿಂಗ್ ಬಾಬಾ, ರಾಧಿಕಾ ನಾರಾಯಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಪ್ರಕಾಶ್ ರಾಜ್ಗಾಗಿ ಚಿತ್ರತಂಡ ಕಾದು ಕುಳಿತಿದೆ.