ಪುತ್ತೂರು: ಎಪಿಎಂಸಿಗೆ ಹೋಗುವ ರಸ್ತೆಯಲ್ಲಿ ಆದರ್ಶ ಆಸ್ಪತ್ರೆಯ ಬಳಿಯ ಸೇತುವೆ ಅಗಲೀಕರಣ ಹಾಗೂ ರೈಲ್ವೆ ನಿಲ್ದಾಣ ಸಂಪರ್ಕದ ಹಾರಾಡಿ ರಸ್ತೆ ಅಭಿವೃದ್ಧಿಗೆ ರೈಲ್ವೆ ಇಲಾಖೆ ನಿರಾಕ್ಷೇಪಣಾ ಪತ್ರವನ್ನು ನಗರಸಭೆಗೆ ನೀಡಿದ ಹಿನ್ನೆಲೆಯಲ್ಲಿ ಜೂ.1 ರಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ನೇತೃತ್ವದಲ್ಲಿ ಸದಸ್ಯರು, ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದರು.

ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಹಾರಾಡಿ ರೈಲ್ವೇ ರಸ್ತೆ ಡಾಮರೀಕರಣದ ಮೂಲಕ ಅಭಿವೃದ್ಧಿ ಹೊಂದಲಿದೆ.
ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷರು, ಸಂಸದರು, ಶಾಸಕರ ಮೂಲಕ ರೈಲ್ವೇ ಇಲಾಖೆಯಿಂದ ಎನ್.ಓ.ಸಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ರಸ್ತೆ ಅಭಿವೃದ್ಧಿಗಾಗಿ ಅಂದಾಜು ಪಟ್ಟಿ ತಯಾರಿಸಿದ ಬಳಿಕ ರಸ್ತೆಯ ಪರಿಶೀಲನೆಯನ್ನು ನಡೆಸಿದರು.
ಎಪಿಎಂಸಿ ಹೋಗುವ ರಸ್ತೆಯಲ್ಲಿ ಆದರ್ಶ ಆಸ್ಪತ್ರೆಯ ಬಳಿಯ ಸೇತುವೆ ಅಗಲೀಕರಣಕ್ಕೂ ನಗರಸಭೆ ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಈ ಹಿನ್ನೆಲೆ ಭೇಟೆ ನೀಡಿ ಪರಿಶೀಲನೆ ನಡೆಸಿದರು.

ಆದರ್ಶ ಆಸ್ಪತ್ರೆಯ ಬಳಿಯಿಂದ ಎಪಿಎಂಸಿಗೆ ಹೋಗುವ ರಸ್ತೆಯಲ್ಲಿರುವ ಅಂಡರ್ ಪಾಸ್ ಯೋಜನೆಗೆ ಪೂರಕವಾಗಿ ರಸ್ತೆಯಲ್ಲಿರುವ ಸೇತುವೆ ಅಗಲೀಕರಣವಾಗಲಿದೆ. ಎಪಿಎಂಸಿ ರಸ್ತೆ ಅಗಲೀಕರಣ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದು, ಇದೀಗ ರಸ್ತೆ ಅಗಲೀಕರಣಕ್ಕೆ ಅಂದಾಜುಪಟ್ಟಿ ತಯಾರಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ನಗರಸಭೆಯೊಳಗೆ ರಸ್ತೆ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದ್ದೆ ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ರವರು ತಿಳಿಸಿದ್ದಾರೆ.

























