ಪುತ್ತೂರು: ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ 8ನೇ ವರ್ಷದ ಸಾರ್ವಜನಿಕ ಶನಿಪೂಜೆ ಸಮಿತಿಯ ಸಭೆಯು ಅರುಣ್ ಕುಮಾರ್ ಪುತ್ತಿಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ರವಿ ಶೆಟ್ಟಿ ಮೂಡಂಬೈಲು, ಅಧ್ಯಕ್ಷರಾಗಿ ಸತೀಶ್, ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ, ಕಾರ್ಯದರ್ಶಿಯಾಗಿ ದೀಕ್ಷಿತ್ ಆಯ್ಕೆಗೊಂಡರು.

ಸಭೆಯಲ್ಲಿ ಕಳೆದ ವರ್ಷದ ಲೆಕ್ಕಚಾರದ ಮಂಡನೆಯನ್ನು ಮಾಡಲಾಯಿತು. ಈ ಬಾರಿ ಪೂಜೆಯನ್ನು ವಿಜೃಂಭಣೆಯಿಂದ ನಡೆಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಜೂ.25 ರಂದು ಅರ್ಧ ಏಕಾಹ ಭಜನೆ, ಸಾಯಂಕಾಲ ಶನೇಶ್ವರ ಪೂಜೆ, ಸಭಾಕಾರ್ಯಕ್ರಮ ನಂತರ ಯಕ್ಷಗಾನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಹಿರಿಯರಾದ ಸುಧೀರ್ ಶೆಟ್ಟಿ ನೇಸರ, ಜಯಪ್ರಸಾದ್, ಪ್ರಶಾಂತ್ ಆಚಾರ್ಯ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಜಯಪ್ರಸಾದ್ ಸ್ವಾಗತಿಸಿ, ಪ್ರಶಾಂತ್ ಆಚಾರ್ಯ ವಂದಿಸಿದರು.

























