ಗಾಂಧಿನಗರ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಕೆಲವರು ಮನೆಯಲ್ಲಿ ಹಿರಿಯರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗ್ತಾರೆ. ಇವೆಲ್ಲಾ ಕಾಮನ್. ಜೊತೆಗೆ ಯುವಕ ಯುವಕನನ್ನೇ ವರಿಸೋದು, ಯುವತಿ ಯುವತಿಯ ಕೈ ಹಿಡಿಯೋದು ಈಗಿನ ಜನರೇಶನ್ನಲ್ಲಿ ಹೊಸದೇನಲ್ಲ. ಆದ್ರೆ, ನೀವೆಂದೂ ಕಂಡು ಕೇಳರಿಯದ ಮದುವೆ ಇಲ್ಲಿ ನಡೆದಿದೆ.
ಹೀಗೆ ಸೌಂದರ್ಯ ಗಣಿ ಹೊತ್ತು ಮದುವೆಗೆ ಗಿಣಿಯಂತೆ ವಧು ರೆಡಿಯಾಗಿದ್ದಾಳೆ. ಕೈಗೆ ಮದರಂಗಿ, ತಲೆಗೆ ಬಾಸಿಂಗ.. ಮೈಗೆ ಅರಿಷಿಣ.. ಮನಸಲ್ಲಿ ಕಾತುರತೆ.. ಮನೆಯಲ್ಲಿ ಸಂತೋಷ. ಇದೆಲ್ಲದಕ್ಕೂ ಗುಜರಾತ್ನ ಗೋತ್ರಿ ಏರಿಯಾ ಸಾಕ್ಷಿಯಾಗಿತ್ತು. ಇದಕ್ಕೆ ಕಾರಣ ಮದುವೆ.. ಇಡೀ ಭಾರತದಲ್ಲಿ ಮೊದಲ ಭಾರಿಗೆ ನಡೀತಿರೋ ಅಪರೂಪದ ಶೈಲಿಯ ವಿವಾಹ ಕಾರ್ಯಕ್ರಮ.

ದೇಶದಲ್ಲಿ ಮೊದಲ ಸೋಲೋಗಮಿ ಮದುವೆಯಾಗೋದಾಗಿ ಘೋಷಿಸಿದ್ದ 24 ವರ್ಷದ ಕ್ಷಮಾಬಿಂದು ಸಂಚಲನ ಸೃಷ್ಟಿಸಿದ್ದರು. ಬಿಜೆಪಿ ನಾಯಕರೊಬ್ಬರು ಇದಕ್ಕೆ ಬಹಿರಂಗ ವಿರೋಧವೂ ವ್ಯಕ್ತಪಡಿಸಿದ್ದರು. ಇದರ ನಡುವೆ ನಿನ್ನೆ ಕ್ಷಮಾಬಿಂದು ನವಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನನ್ನ ತಾನೇ ವರಿಸಿದ್ದಾಳೆ. ಅರ್ಥಾತ್ ತನ್ನ ಕೊರಳಿಗೆ ತನ್ನ ಕೈಯಾರೆ, ತಾನೇ ತಾಳಿ ಕಟ್ಟಿಕೊಂಡಿದ್ದಾಳೆ.
ಎಲ್ಲಾ ಜನರು ತಾವು ಇಷ್ಟಪಟ್ಟವರನ್ನ ಮದುವೆ ಆಗ್ತಾರೆ. ನಾನು ನನ್ನನ್ನೇ ಇಷ್ಟಪಡುತ್ತೇನೆ, ಹೀಗಾಗಿ ನಾನು ನನ್ನನ್ನೇ ಮದುವೆಯಾಗ್ತೇನೆ ಅಂತಿದ್ದ ಕ್ಷಮಾಬಿಂದು ಹೇಳಿದ್ದನ್ನ ಮಾಡಿ ತೋರಿಸಿದ್ದಾರೆ. ಪೋಷಕರ ಒಪ್ಪಿಗೆಯೊಂದಿಗೆ ಸ್ವಯಂ ವಿವಾಹವಾಗಿದ್ದಾರೆ. ಸೋಲೋಗಮಿ ವಿದೇಶಗಳಲ್ಲಿ ಈಗಾಗಲೇ ಟ್ರೆಂಡ್ ಆಗ್ಬಿಟ್ಟಿದೆ. ಆದ್ರೆ, ಭಾರತದಂತ ಸಾಂಪ್ರಾದಾಯಿಕ ದೇಶದಲ್ಲಿ ಅಪರೂಪದಲ್ಲಿ ಅಪರೂಪದ ಮದುವೆ ಬಹಳ ವೈಭವೋತೀತವಾಗಿ ನಡೆದಿದೆ. 40 ನಿಮಿಷದ ಅವಧಿಯಲ್ಲಿ ಶಾಸ್ತ್ರೋತ್ತವಾಗಿ ಮದುವೆ ಸಾಕಾರಗೊಂಡಿದೆ.

ಇನ್ನೂ, ಈ ಶ್ರೀಗಂಧದ ಗೊಂಬೆ, ಮದುವೆಯಾದ ಬಳಿಕ ತನಗೆ ಸಹಕಾರ ನೀಡಿದ ಎಲ್ರಿಗೂ ಧನ್ಯವಾದ ತಿಳಿಸಿದ್ದಾರೆ. ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಯಾರು ನನಗೆ ಮೆಸೇಜ್ ಮಾಡಿದ್ರು, ಶುಭಾಷಯ ಕೋರಿದ್ರು. ನಾನು ನಂಬಿದ್ದ ವಿಚಾರಕ್ಕಾಗಿ ಹೋರಾಡಲು ಬಲ ತುಂಬಿದ್ದಕ್ಕಾಗಿ.. ನಾನು ತುಂಬಾನೇ ಖುಷಿಯಾಗಿದ್ದೇನೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಯೂ.. ಐ ಲವ್ ಯೂ ಆಲ್.

ಒಟ್ಟಿನಲ್ಲಿ ನೀ ಮದುವೆಯೊಳಗೋ? ಮದುವೆ ನಿನ್ನೊಳಗೋ? ಅನ್ನೋ ರೀತಿ ಕ್ಷಮಾ ಬಿಂದು ಮದುವೆಯಾಗಿದ್ದಾಳೆ. ಇದು ಇಲ್ಲಿಗೆ ಮುಗಿದಿಲ್ಲ. ಯಾಕಂದ್ರೆ ಈಕೆ ಕನಸು ಇನ್ನೂ ಇದೆ. ಮದುವೆ ಬಳಿಕ ಹನಿಮೂನ್ ಕೂಡ ಪ್ಲಾನ್ ಮಾಡಿದ್ದಾಳೆ. ಎರಡು ವಾರ ಗೋವಾಗೆ ಸೆಲ್ಫ್ ಟ್ರಿಪ್ಗೆ ಮುಂದಾಗಿದ್ದಾಳೆ. ಹೀಗಾಗಿ ಕ್ಷಮಾ ಬಿಂದು ಮುಂದಿನ ಹೆಜ್ಜೆ, ಬ್ಯಾಗ್ ಪ್ಯಾಕ್. ರೈಡ್ ಟು ಗೋವಾ..




























