ಪುತ್ತೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸಲಾಗಿದೆ ಹಾಗೂ ಜಾತ್ರೆ ಇತರ ಉತ್ಸವಗಳಿಗೂ ನಿರ್ಬಂಧ ಹೇರಲಾಗುವುದು ಎಂದು ಹೇಳಾಗುತ್ತಿತ್ತು.
ಈ ಕುರಿತಾಗಿ ಪುತ್ತೂರಿನಲ್ಲಿ ಸ್ಪಷ್ಟನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು “ಯಾವುದೇ ಉತ್ಸವಗಳಿಗೂ ನಿರ್ಬಂಧ ಹೇರುವುದಿಲ್ಲ ಎಲ್ಲಾ ಉತ್ಸವಗಳು ಕೋವಿಡ್ ಗೈಡ್ ಲೈನ್ ನಡಿಯಲ್ಲಿ ನಡೆಯಲಿದೆ, ಹೆಚ್ಚು ಜನರು ಸೇರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಜೊತೆಗೆ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು” ಎಂದು ಅವರು ಹೇಳಿದರು.