ಪುತ್ತೂರು: ದಾರಂದಕುಕ್ಕು ನಿವಾಸಿ ಸುಮಂಗಲ ಶೆಣೈ ರವರು ನವೀನ್ ರೈ ಎಂಬವರ ಜೊತೆಯಲ್ಲಿ ಫುಡ್ ಸೇಫ್ಟಿಗೆ ಸಂಬಂಧಿಸಿದ ಪ್ರಮಾಣಪತ್ರ ಕೊಡುವ ಕೆಲಸ ಮಾಡಿಕೊಂಡಿದ್ದು, ಈ ಬಗ್ಗೆ ಹಣ ವಿಚಾರವಾಗಿ ಗಲಾಟೆ ಸಂಭವಿಸಿ ಸುಮಂಗಲ ರವರ ಮೇಲೆ ಕೈಕಾರ ನಿವಾಸಿ ನವೀನ್ ರೈ ಮತ್ತು ಆತನ ಪತ್ನಿ ನಿಮಿತಾ ರೈ ರವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕು ಚಿಕ್ಕಮುಡ್ನೂರು, ದಾರಂದಕುಕ್ಕು ನಿವಾಸಿ ಸುಮಂಗಲಾ ಶೆಣೈ ರವರು ಒಳಮೊಗ್ರು ಕೈಕಾರ ನಿವಾಸಿ ನವೀನ್ ರೈ ಮತ್ತು ಅವರ ಪತ್ನಿ ನಿಮಿತಾ ರೈ ರವರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಸುಮಂಗಲ ಶೆಣೈ ರವರು ನವೀನ್ ರೈ ಎಂಬವರ ಜೊತೆಯಲ್ಲಿ ಫುಡ್ ಸೇಫ್ಟಿಗೆ ಸಂಬಂಧಿಸಿದ ಪ್ರಮಾಣಪತ್ರ ಕೊಡುವ ಕೆಲಸ ಮಾಡಿಕೊಂಡಿದ್ದು, ನವೀನ್ ರೈ ಯವರಿಂದ ಸುಮಂಗಲ ರವರಿಗೆ ಸುಮಾರು 2,00,000/- ರೂಪಾಯಿ ಬರಲು ಬಾಕಿಯಿದ್ದು, ಈ ಬಗ್ಗೆ ಹಲವಾರು ಬಾರಿ ಕೇಳಿದರೂ ಹಣವನ್ನು ಹಿಂತಿರುಗಿಸಿರುವುದಿಲ್ಲ.
ಅಷ್ಟೇ ಅಲ್ಲದೇ ಇತ್ತೀಚಿಗೆ ಮೊಬೈಲ್ ಫೋನ್ ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ, ಈ ಹಿನ್ನೆಲೆ ಜೂ.27 ರಂದು ಆತನ ಮನೆಗೆ ತೆರಳಿ ಹಣ ಕೇಳಿದಾಗ ಬಿಸಿ ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಿಂದ ಹಲ್ಲೆ ನಡೆಸಿ, ಮಾನ ಭಂಗಕ್ಕೆ ಯತ್ನಿಸಿದ್ದು, ಅಷ್ಟೇ ಅಲ್ಲದೇ ಆತನ ಪತ್ನಿ ನಿಮಿತಾ ಕೂಡ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಬಳಿಕ ನವೀನನು ’24 ಗಂಟೆಯೊಳಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಠಾಣಾ ಅ.ಕ್ರ : 73/2022 ಕಲಂ: 324, 354(A), 323, 504, 506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ..

























