ವಿಟ್ಲ: ಯುವತಿಯೊಬ್ಬಳ ಮೇಲೆ ಆಟೋದಲ್ಲಿ ಬಂದ ತಂಡವೊಂದು ಚೂರಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.
ಮಾಣಿಯ ಕಾಪಿಕಾಡು ನಿವಾಸಿ ದಿ. ತ್ಯಾಂಪ ಪೂಜಾರಿ ಅವರ ಪುತ್ರಿ, ಪ್ರಸ್ತುತ ಅನಂತಾಡಿಯ ದೇವಿ ನಗರ ನಿವಾಸಿ ಶಕುಂತಾಳ(35) ದಾಳಿಗೊಳಗಾದ ಮಹಿಳೆ ಎಂದು ತಿಳಿದು ಬಂದಿದೆ. ಮಾಣಿಯ ದಾಳಿಯಿಂದ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಈಕೆ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಆಕ್ಟೀವಾ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ತಂಡ ಮಾರಕಾಯುಧಗಳಿಂದ ದಾಳಿ ನಡೆಸಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದುರೂ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..