ಪುತ್ತೂರು: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಸ್ಟೇಟ್ ಬೋರ್ಡ್ ವೈದ್ಯರಿಗೆ ಕೊಡುವ ಪ್ರತಿಷ್ಠಿತ ‘ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ ಡೇ ಅವಾರ್ಡ್’ ಈ ಬಾರಿ ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಪ್ರಸಾದ್ ಭಂಡಾರಿ ರವರಿಗೆ ಒಲಿದಿದ್ದು, ಈ ಹಿನ್ನೆಲೆ ಜೂ.27 ರಂದು ಸಂಜೆ ಬಿಜೆಪಿ ಪುತ್ತೂರು ನಗರ ಮಂಡಲ ವತಿಯಿಂದ ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರೀ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸ್ಥಳೀಯ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರ್, ಶಕ್ತಿಕೇಂದ್ರ ಪ್ರಮುಖ್ ನೀಲಂತ್ ಕುಮಾರ್, ಕೊಂಬೆಟ್ಟು ಬೂತ್ ಕಾರ್ಯದರ್ಶಿ ನವೀನ್ ಪಡಿವಾಳ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಭಾವತೀ ಹಾಗೂ ಡಾ. ಪ್ರಸಾದ್ ಭಂಡಾರಿ ರವರ ಪತ್ನಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪುತ್ರಿ ಅಶ್ವಿನೀ ಉಪಸ್ಥಿತರಿದ್ದರು.


























