ಸುಳ್ಯ: ಕಾರೊಂದು ಅಪಘಾತಕ್ಕೀಡಾಗಿ ತೋಟಕ್ಕೆ ಮಗುಚಿ ಬಿದ್ದ ಘಟನೆ ಬುಧವಾರ ರಾತ್ರಿ ಅರಂತೋಡು ಆಲೆಟ್ಟಿ ಗ್ರಾಮದ ನಾರ್ಕೋಡಿಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಪಕ್ಕದ ತೋಟಕ್ಕೆ ಮಗುಚಿ ಬಿದ್ದಿದ್ದು, ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹೈದ್ರಾಬಾದ್ ಮೂಲದ ಪ್ರವಾಸಿಗರು ಕನ್ಯಾಕುಮಾರಿ, ಗುರುವಾಯೂರು ಯಾತ್ರೆ ಮುಗಿಸಿ ಬಂದಡ್ಕ-ಸುಳ್ಯ ರಸ್ತೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿ 4 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.



























