ಪುತ್ತೂರು: ಬೊಳುವಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪವರ್ ಪ್ಯಾಕ್ ಬ್ಯಾಟರಿ ಶಾಪ್ ನ ಮಾಲಕ ಕಿರಣ್ ಶೆಟ್ಟಿ(45) ರವರು ಜು.8 ರಂದು ಹೃದಯಾಘಾತದಿಂದಾಗಿ ನಿಧನರಾದರು.

ಕಿರಣ್ ಶೆಟ್ಟಿ ರವರು ಪುತ್ತೂರಿನ ಬೊಳ್ವಾರ್ ಹೇಮಂತ್ ಪ್ಲಾಜದಲ್ಲಿ ಕಳೆದ ಒಂದೂವರೆ ದಶಕದಿಂದ ಪವರ್ ಪ್ಯಾಕ್ ಬ್ಯಾಟರಿ ಅಂಗಡಿಯನ್ನು ನಡೆಸುತ್ತಿದ್ದರು. ಅವರು ಮೂಲತಃ ಕಲ್ಲಾರೆ ನಿವಾಸಿಯಾಗಿದ್ದು, ಪ್ರಸ್ತುತ ಬೈಪಾಸ್ ರಸ್ತೆಯಲ್ಲಿನ ಪ್ಲಾಟ್ ನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.



























